ಚಾಮರಾಜನಗರ: ಭಕ್ತರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಮಹದೇಶ್ವರ ಬೆಟ್ಟದ ಆನೆತಲೆದಿಂಬದ ಬಳಿ ನಡೆದಿದೆ. ಮಳವಳ್ಳಿ ತಾಲೂಕು ಹೊನ್ನೇನಹಳ್ಳಿಯ ಲಕ್ಷ್ಮಿ(40) ಮೃತ ದುರ್ದೈವಿಯಾಗಿದ್ದಾರೆ.
ಇವರು ಇತರ ಮೂವರು ಭಕ್ತರ ಜೊತೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ಪಾದಯಾತ್ರಿಗಳ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದ್ದು, ಈ ಕುರಿತು ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296