nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಾಸನದ ಹೇಮಾವತಿ ನಗರದಲ್ಲಿ ಅದ್ದೂರಿಯಾಗಿ ಜರುಗಿದ ಗಣಪತಿ ವಿಸರ್ಜನೆ: ಜಾನಪದ ಕಲಾ ವೈಭವದೊಂದಿಗೆ ಕಳೆಕಟ್ಟಿದ ಮೆರವಣಿಗೆ

    October 1, 2026

    ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೆ.ಎಂ.ಸುರೇಶ್

    October 1, 2026

    ವಿವಿಧ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ

    October 1, 2026
    Facebook Twitter Instagram
    ಟ್ರೆಂಡಿಂಗ್
    • ಹಾಸನದ ಹೇಮಾವತಿ ನಗರದಲ್ಲಿ ಅದ್ದೂರಿಯಾಗಿ ಜರುಗಿದ ಗಣಪತಿ ವಿಸರ್ಜನೆ: ಜಾನಪದ ಕಲಾ ವೈಭವದೊಂದಿಗೆ ಕಳೆಕಟ್ಟಿದ ಮೆರವಣಿಗೆ
    • ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೆ.ಎಂ.ಸುರೇಶ್
    • ವಿವಿಧ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ
    • ಬರಪೀಡಿತ ಪ್ರದೇಶದಲ್ಲಿ ‘ಮರ’ಣಹೋಮ:  ಪ್ರಕರಣದಿಂದ ವ್ಯಾಪಾರಿ ಔಟ್: ಅರಣ್ಯ ಇಲಾಖೆ ನಡೆಗೆ ತೀವ್ರ ಸಂಶಯ
    • ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 9 ಮಂದಿಗೆ ಗಾಯ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ
    • ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!
    • ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್  ಹೇಳಿದ್ದೇನು?
    • 2028ಕ್ಕೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬರಪೀಡಿತ ಪ್ರದೇಶದಲ್ಲಿ ‘ಮರ’ಣಹೋಮ:  ಪ್ರಕರಣದಿಂದ ವ್ಯಾಪಾರಿ ಔಟ್: ಅರಣ್ಯ ಇಲಾಖೆ ನಡೆಗೆ ತೀವ್ರ ಸಂಶಯ
    ಕೊರಟಗೆರೆ October 1, 2026

    ಬರಪೀಡಿತ ಪ್ರದೇಶದಲ್ಲಿ ‘ಮರ’ಣಹೋಮ:  ಪ್ರಕರಣದಿಂದ ವ್ಯಾಪಾರಿ ಔಟ್: ಅರಣ್ಯ ಇಲಾಖೆ ನಡೆಗೆ ತೀವ್ರ ಸಂಶಯ

    By Ganesh TumkuruOctober 1, 2026No Comments2 Mins Read
    koratagere

    ಕೊರಟಗೆರೆ: ಒಂದೆಡೆ ಸೂಕ್ತ ಮಳೆಯಿಲ್ಲದೆ ಭೀಕರ ಬರಗಾಲ ಆವರಿಸುತ್ತಿದ್ದರೆ, ಇನ್ನೊಂದೆಡೆ ಕೊರಟಗೆರೆ ಹಾಗೂ ಮಧುಗಿರಿ ಭಾಗದಲ್ಲಿ ಪ್ರಕೃತಿಯ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಲೇ ಇದೆ. ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದ ಕೆರೆ ಅಂಗಳದಲ್ಲಿದ್ದ ಮರಗಳನ್ನು ಅಕ್ರಮವಾಗಿ ಕೊಯ್ದು ಸಾಗಾಣಿಕೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

    ಜೆಟ್ಟಿ ಅಗ್ರಹಾರ ಗ್ರಾಮದ ಸರ್ವೆ ನಂಬರ್ 111ರ ಕೆರೆ ಅಂಗಳದಲ್ಲಿದ್ದ ಸುಮಾರು 18 ನೀಲಗಿರಿ ಮರಗಳನ್ನು ಅಕ್ರಮವಾಗಿ ಕೊಯ್ದು ಉರುಳಿಸಲಾಗಿತ್ತು. ಮಾಹಿತಿ ಪಡೆದು ಸ್ಥಳಕ್ಕೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಸುಮಾರು 2,500 ಕೆ.ಜಿ ನೀಲಗಿರಿ ಸೌದೆಯನ್ನು ಜಪ್ತಿ ಮಾಡಿ, ನರಸಿಂಹರಾಜು, ಕೆಂಪಯ್ಯ ಹಾಗೂ ಪುಟ್ಟಯ್ಯ ಎಂಬುವವರ ವಿರುದ್ಧ FOC ಸಂಖ್ಯೆ : 07/2026-27ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸ್ಥಳೀಯರ ಬಲವಾದ ಆರೋಪದಂತೆ, ಅಕ್ರಮವಾಗಿ ಮರ ಕೊಯ್ದು ಸಾಗಾಣಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯಾಪಾರಿಯೊಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣದಿಂದಲೇ ಕೈಬಿಟ್ಟಿದ್ದಾರೆ! ಈ ನಡೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, “ಅಧಿಕಾರಿಗಳು ಯಾರನ್ನೋ ರಕ್ಷಿಸಲು ಶಾಮೀಲಾಗಿದ್ದಾರೆಯೇ?” ಎಂಬ ಪ್ರಶ್ನೆ ಮೂಡಿದೆ.

    ಕೊರಟಗೆರೆ–ಮಧುಗಿರಿ ಗಡಿಪ್ರದೇಶವು ‘ನ್ಯಾಷನಲ್ ಎಕೋ ಸೆನ್ಸಿಟಿವ್ ಜೋನ್’ (ಪರಿಸರ ಸೂಕ್ಷ್ಮ ವಲಯ) ವ್ಯಾಪ್ತಿಗೆ ಒಳಪಡುತ್ತದೆ. ಆದರೂ ಸಹ ಅರಣ್ಯ ಇಲಾಖೆಯ ಯಾವುದೇ ಪರವಾನಗಿ ಇಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ಮರಗಳನ್ನು ಕೊಯ್ಯುವ ದಂಧೆ ಜೋರಾಗಿ ನಡೆಯುತ್ತಿದೆ. ಸಾಲದಾಗಿ, ಈ ಭಾಗದಲ್ಲಿ ಅನಧಿಕೃತವಾಗಿ ಹಲವು ಸಾಮಿಲ್ (Saw Mills) ಗಳು ತಲೆ ಎತ್ತಿದ್ದು, ಹಸಿರು ಮರಗಳ ಮರಣ ಹೋಮವೇ ನಡೆಯುತ್ತಿದೆ.

    ಅರಣ್ಯ ರಕ್ಷಣೆ ಮಾಡಬೇಕಾದ ಅಧಿಕಾರಿಗಳ ಮೂಗಿನ ತುದಿಯಲ್ಲೇ ಅಕ್ರಮಗಳು ತಾಂಡವವಾಡುತ್ತಿವೆ. ಗಣಿ ಕಳ್ಳರು ಅರಣ್ಯ ವ್ಯಾಪ್ತಿಯೊಳಗೆ ರಸ್ತೆ ನಿರ್ಮಿಸಿಕೊಂಡು, ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. RFO, DFO ಹಾಗೂ DCFO ದರ್ಜೆಯ ಉನ್ನತಾಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ :

    ಕಾಡು ಧ್ವಂಸದಿಂದಾಗಿ ಇಡೀ ಪ್ರದೇಶದಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಕ್ಷಣವೇ ರಾಜ್ಯದ ಅರಣ್ಯ ಇಲಾಖೆಯ ಸಚಿವರು ಹಾಗೂ ಅರಣ್ಯ ಪಡೆ ಮುಖ್ಯಸ್ಥರು (PCCF) ಮಧ್ಯ ಪ್ರವೇಶಿಸಬೇಕು.

    ಕೂಡಲೇ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ, ಮರ ಕಳ್ಳರು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೆ.ಎಂ.ಸುರೇಶ್

    October 1, 2026

    ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ

    September 29, 2026

    ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.

    September 29, 2026

    Leave A Reply Cancel Reply

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹಾಸನದ ಹೇಮಾವತಿ ನಗರದಲ್ಲಿ ಅದ್ದೂರಿಯಾಗಿ ಜರುಗಿದ ಗಣಪತಿ ವಿಸರ್ಜನೆ: ಜಾನಪದ ಕಲಾ ವೈಭವದೊಂದಿಗೆ ಕಳೆಕಟ್ಟಿದ ಮೆರವಣಿಗೆ

    October 1, 2026

    ಹಾಸನ ನಗರದ ಹೇಮಾವತಿ ನಗರದ ರಾಯಲ್ ಅಪೋಲೊ ಸ್ಕೂಲ್ ಹಿಂಭಾಗದಲ್ಲಿ ವಿಕಟ ಸೇವಾ ಟ್ರಸ್ಟ್ ಮತ್ತು ವಾಲಿಬಾಲ್ ಗೆಳೆಯರ ಬಳಗದ…

    ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೆ.ಎಂ.ಸುರೇಶ್

    October 1, 2026

    ವಿವಿಧ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ

    October 1, 2026

    ಬರಪೀಡಿತ ಪ್ರದೇಶದಲ್ಲಿ ‘ಮರ’ಣಹೋಮ:  ಪ್ರಕರಣದಿಂದ ವ್ಯಾಪಾರಿ ಔಟ್: ಅರಣ್ಯ ಇಲಾಖೆ ನಡೆಗೆ ತೀವ್ರ ಸಂಶಯ

    October 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.