nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026

    ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?

    November 8, 2026
    Facebook Twitter Instagram
    ಟ್ರೆಂಡಿಂಗ್
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    • ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?
    • ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?
    • ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?
    • ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!
    • ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು
    • ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿರಾಟ್ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು
    ರಾಜ್ಯ ಸುದ್ದಿ May 28, 2024

    ವಿರಾಟ್ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು

    By adminMay 28, 2024No Comments2 Mins Read
    cricket

    ಪ್ರಸಕ್ತ ಸಾಲಿನ ಐಪಿಎಲ್ ಫೈನಲ್ ಮುಗಿದ ಬಳಿಕವೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ನೀಡಿದ ಹೇಳಿಕೆ ಮತ್ತೆ ವಿವಾದಕ್ಕೆ ಕಾರಣವಾಗಿದೆ.

    ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನಡುವೆಯೂ ಸ್ಟಾರ್ ಬ್ಯಾಟರ್ ನ ನಿರಂತರತೆ ತಂಡಕ್ಕೆ ಹೊರೆಯಾಗಿದೆ ಎಂದು ರಾಯುಡು ಹೇಳಿದ್ದಾರೆ.

    ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರೂ ಕೊಹ್ಲಿ ಬಗ್ಗೆ ನೀಡಿರುವ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಕೆವಿನ್ ಪೀಟರ್ ಸನ್ ಮತ್ತು ಮಯಾಂತಿ ಲ್ಯಾಂಜರ್ ಜತೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ವಿಶ್ಲೇಷಣೆಯ ವೇಳೆ ಮಾತನಾಡಿದ ರಾಯುಡು, ಕೊಹ್ಲಿಯವರ ಉತ್ಕೃಷ್ಟತೆ ಆರ್ ಸಿಬಿಯಂಥ ತಂಡದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚರ್ಚಿಸಿದರು. “ಅತ್ಯುನ್ನತ ಗುಣಮಟ್ಟದ ಮಾನದಂಡ ಹುಟ್ಟುಹಾಕಿದ ಸ್ಟಾರ್ ಕ್ರಿಕೆಟಿಗ ದಂತಕಥೆ ಎನಿಸಿದ ವಿರಾಟ್ ಕೊಹ್ಲಿಯಂಥ ಆಟಗಾರರು ನಿಮ್ಮಲ್ಲಿದ್ದಾರೆ. ಅಂಥ ತಂಡದಲ್ಲಿ ಯುವಕರು ಇರುವುದು, ಅಂಥ ಗುಣಮಟ್ಟವನ್ನು ಸಾಧಿಸುವುದು ಕಷ್ಟಸಾಧ್ಯ. ಏಕೆಂದರೆ ಅವರು ಆ ಹಂತದ ಸಾಧನೆ ಬಯಸುತ್ತಾರೆ” ಎಂದು ಹೇಳಿದ್ದಾರೆ.

    ಇದು ಯುವಕರಿಗೆ ಒಳ್ಳೆಯದಲ್ಲವೇ ಎಂಬ ಪೀಟರ್ ಸನ್ ವಾದವನ್ನು ಅಲ್ಲಗಳೆದ ರಾಯುಡು, ವಿರಾಟ್ ಕೊಹ್ಲಿಯಂತೆ ಆಗಬೇಕು ಎಂಬ ಪ್ರಯತ್ನ ಕೆಲವೊಮ್ಮೆ ಹೊರೆಯಾಗುತ್ತದೆ. ಏಕೆಂದರೆ ಅವರ ಮಟ್ಟವನ್ನು ತಲುಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

    ಆದರೆ ರಜತ್ ಪಾಟಿದಾರ್ ಸಾಧನೆ ಮಾಡಿದ್ದಾರಲ್ಲ ಎಂಬ ಲ್ಯಾಂಜರ್ ಅಭಿಪ್ರಾಯಕ್ಕೂ ಸಹಮತ ವ್ಯಕ್ತಪಡಿಸದ ರಾಯುಡು, “ಪಾಟಿದಾರ್ ಕೇವಲ ಪಾಟಿದಾರ್ ಆಗಿಯೇ ಇರುತ್ತಾರೆ. ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ತಂಡದಲ್ಲಿ 11 ಮಂದಿ ವಿರಾಟ್ ಕೊಹ್ಲಿಯವರು ಇರಲು ಸಾಧ್ಯವಿಲ್ಲ ಎನ್ನುವುದನ್ನು ತಂಡದ ವ್ಯವಸ್ಥಾಪಕರು ಅರ್ಥಮಾಡಿಕೊಳ್ಳಬೇಕು. ಒಬ್ಬ ವಿರಾಟ್ ಕೊಹ್ಲಿ ಹಾಗೂ ತಮ್ಮದೇ ಬಲ ಹಾಗೂ ದೌರ್ಬಲ್ಯಗಳನ್ನು ಹೊಂದಿರುವ ಇತರ 10 ಮಂದಿ ಆಟಗಾರರು ಇರಲು ಸಾಧ್ಯ. ಸಂಪನ್ಮೂಲ ವಿಚಾರದಲ್ಲಿ ಅವರನ್ನು ಬಳಸಿಕೊಳ್ಳುವುದು ಅಗತ್ಯ. ಮೊದಲ ಸೀಸನ್ ನಲ್ಲೇ ಪಂದ್ಯ ಗೆಲ್ಲಬೇಕು ಎಂದು ನಿರೀಕ್ಷಿಸಲಾಗದು. ಮ್ಯಾಚ್ ವಿನ್ನರ್ ಆಗಿ ಬೆಳೆಯಲು ಅವಕಾಶ ನೀಡಬೇಕು. ಯುವಕರನ್ನು ಬೆಳೆಸುವ, ಬೆಳೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಕೂಡಾ ತಮ್ಮ ಗುಣಮಟ್ಟವನ್ನು ಸಲೀಸಾಗಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ರಾಯುಡು ಈ ಹಿಂದೆ ಕೂಡಾ ಕೆಕೆಆರ್ ಗೆಲುವಿನ ಸಂದರ್ಭದಲ್ಲಿ ಆರ್ ಸಿಬಿಯನ್ನು ಟೀಕಿಸಿದ್ದರು. ಆರೆಂಜ್ ಕ್ಯಾಪ್ ನಂಥ ವೈಯಕ್ತಿಕ ಗೌರವಗಳು ತಂಡಕ್ಕೆ ಐಪಿಲ್ ಪ್ರಶಸ್ತಿ ಗೆದ್ದುಕೊಡಲಾರವು. ಇದರ ಬದಲು ಸಾಂಘಿಕ ಪ್ರಯತ್ನವಷ್ಟೇ ಯಶಸ್ಸಿನ ರಹದಾರಿ ಎಂದು ಹೇಳಿದ್ದರು. ರಾಯುಡು ಅಭಿಪ್ರಾಯಗಳು ಕ್ರಿಕೆಟ್ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ವೈಯಕ್ತಿಕ ಸಾಧನೆಯನ್ನು ತಂಡದ ಯಶಸ್ಸಾಗಿ ಪರಿವರ್ತಿಸುವಲ್ಲಿ ವಿಫಲವಾದ ಅರ್ಸಿಬಿ ತಂಡದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    November 7, 2026

    ಚೆಸ್‌ ನಲ್ಲಿ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಆಯ್ಕೆ |   ರಾಜ್ಯ ಮಟ್ಟದ ಚಾಂಪಿಯನ್‌ ಶಿಪ್‌ ನಲ್ಲಿ ಯದುನಂದನ್ ಜಿ.ಎನ್. ಸಾಧನೆ

    November 6, 2026

    ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ಎಚ್ಚರ! ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ

    November 6, 2026

    Comments are closed.

    Our Picks

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ಬ್ಯಾಂಕ್‌ ಗೆ ಸಂಬಂಧಿಸಿದ ಕೆಲಸಗಳಿವೆಯೇ? ಹಾಗಿದ್ದರೆ ಮುಂದಿನ ವಾರದ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಭಾರತೀಯ ರಿಸರ್ವ್ ಬ್ಯಾಂಕ್…

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026

    ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?

    November 8, 2026

    ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.