ಪೊಲೀಸ್ ಇಲಾಖೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.
ಪೊಲೀಸ್ ಇಲಾಖೆ ಸ್ಪಷ್ಟನೆ:
ಗಮನಿಸಿ !! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ.
ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ ಎಂದು ರಾಜ್ಯ ಪೊಲೀಸ್ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.
ಏನಿದು ವೈರಲ್ ಮೆಸೇಜ್?
ಪೊಲೀಸರು ಟ್ರಾವೆಲ್ ಸ್ಕೀಂ ಎಂಬ ಯೋಜನೆ ಆರಂಭಿಸಿದ್ದಾರೆ. ಈ ಮೂಲಕ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ. ಜೊತೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ 1091 ಅಥವಾ 7837018555 ಗೆ ಕರೆ ಮಾಡಿದರೆ ಪೊಲೀಸರು ಮನೆಗೆ ಬಿಡುವ ವ್ಯವಸ್ಥೆ ಮಾಡಲಿದ್ದಾರೆ ಎಂಬ ಸುಳ್ಳು ಸಂದೇಶ ಭಾರಿ ವೈರಲ್ ಆಗಿತ್ತು. ಜೊತೆಗೆ ಈ ಮೆಸೇಜ್ ನ್ನು ಎಲ್ಲಾ ಮಹಿಳೆಯರಿಗೆ ಫಾರ್ವರ್ಡ್ ಮಾಡಿ ಎಂದೂ ಸಂದೇಶದಲ್ಲಿ ಹೇಳಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q