ಬೆಂಗಳೂರು: ಮದ್ಯದ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮದ್ಯ ಪ್ರಿಯರಿಗೆ ಇದು ಸಿಹಿ ಸುದ್ದಿ. ಶೀಘ್ರವೇ ಮದ್ಯದ ಬೆಲೆ ಇಳಿಕೆಯಾಗಲಿದೆಯಂತೆ!. ನೆರೆ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು ಪರಿಷ್ಕರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪರಿಷ್ಕೃತ ದರ ಆಗಸ್ಟ್ 27ರಿಂದಲೇ ಜಾರಿಗೆ ಬರಲಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರಾಂಡ್ ಗಳ ದರದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದೆಯಂತೆ.
ಕರಡು ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯಕ್ಕೆ ಭಾರೀ ಕೊರತೆ ಉಂಟಾಗಿತ್ತು. ಸರ್ಕಾರ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್ ಗಳ ಸಂಖ್ಯೆ 18 ರಿಂದ 16ಕ್ಕೆ ಇಳಿಸಲಾಗಿದೆ.
ಮೊದಲ ಮೂರು ಸ್ಲ್ಯಾಬ್ ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲಾಬ್ ಬಳಿಕ 16ನೇ ಸ್ಲ್ಯಾಬ್ ವರೆಗೆ ದರ ಕಡಿಮೆಯಾಗಲಿದೆ. ಆ ಸ್ಲ್ಯಾಬ್ ಗಳಲ್ಲಿನ ವಿಸ್ಕಿ, ರಮ್, ಬ್ರಾಂಡಿಗಳ ಬೆಲೆ ಸಹಜವಾಗಿಯೇ ಕಡಿಮೆಯಾಗಲಿದೆ ಅಂತ ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q