ಗುಬ್ಬಿ ತಾಲ್ಲೂಕು ಕಡಬ ಹೋಬಳಿ ಬೋಚಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಕರ್ಣಾಟ ಬಲ ಸೇನೆ ವತಿಯಿಂದ ನವೀಕರಣ ಮಾಡಲಾಯಿತು.
ಬೋಚಿಹಳ್ಳಿ ಗ್ರಾಮದ ಸರ್ಕಾರಿಶಾಲೆಗೆ ಕರ್ಣಾಟ ಬಲ ಸೇನೆ ಸಂಘಟನೆ ವತಿಯಿಂದ ಸುಣ್ಣ ಬಣ್ಣವನ್ನು ಹೊಡೆದು ಅಂದವನ್ನು ಹೆಚ್ಚಿಸಲಾಯಿತು. ಶಾಲೆಯ ಮೈದಾನದಲ್ಲಿ ಗಿಡಗಳನ್ನು ನೆಟ್ಟು ಶಾಲೆಯು ಆಕರ್ಷಕವಾಗಿ ಕಾಣುವಂತೆ ಮಾಡಲಾಯಿತು. ಈ ಕಾರ್ಯವನ್ನು ಗ್ರಾಮದ ಯುವ ಮುಖಂಡರಾದಂತಹ ನಾಗೇಶ್ ಬಿ.ಟಿ. ಅಭಿನಂದಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆಯ ನವೀನ್ ಸಿಂಗ್, ಕರ್ಣಾಟ ಬಲ ಸೇನೆಯು ಸರ್ಕಾರಿ ಶಾಲೆ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ನಮ್ಮ ಸರ್ಕಾರಿ ಶಾಲೆಯಲ್ಲಿ ಈ ಬಾರಿಯಿಂದ ಎಲ್ ಕೆ ಜಿ ಮತ್ತು ಯು ಕೆ ಜಿ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುತ್ತಿದ್ದು, ಮಕ್ಕಳ ದಾಖಲಾತಿಯು ಕಳೆದ ಬಾರಿಗಿಂತ ಈ ಬಾರಿ ಅತ್ಯಧಿಕವಾಗಿದೆ ಎಂದರು.


ಮುಖ್ಯ ಶಿಕ್ಷಕರಾದ ಮುದ್ದ ಹನುಮಯ್ಯ, ಗ್ರಾಮಸ್ಥರಾದ ಯೋಗೇಶ್ ಮೂರ್ತಿ, ಕಡೇಕ್ಟ್ರ್ ಶಂಕರ್, ನಾಗರಾಜು, ಗುರು, ಶಾಂತಪ್ಪ, ಚಂದ್ರಶೇಖರ, ಗಿರೀಶ್, ಶೇಖರ್, ದೀಪಕ್, ರಕ್ಷಿತಾ, ಮೇಘ ಹಾಗೂ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


