ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ದಿಕ್ಸೂಚಿ ಎಂದಿದ್ದ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಿದ‍್ಧರಾಮಯ್ಯ, ಗುಜರಾತ್ ಫಲಿತಾಂಶ ಕರ್ನಾಟಕ್ಕ್ಕೆ ದಿಕ್ಸೂಚಿಯಾತ್ರೆ ಪಂಜಾಬ್ ಫಲಿತಾಂಶ ಯಾಕೆ ದಿಕ್ಸೂಚಿ ಆಗಲಿಲ್ಲ. ಅಲ್ಲಿನ ರಾಜಕೀಯ, ಆಡಳಿತ, ಭಾವನೆಗಳು ಬೇರೆ. ಇಲ್ಲಿಯ ರಾಜಕೀಯ. ಭಾವನೆಗಳೇ ಬೇರೆ. ರಾಷ್ಟ್ರ ಚುನಾವಣೆ ಬೇರೆ, ರಾಜ್ಯ ಚುನಾವಣೆ ಬೇರೆ ಎಂದರು.
ಎಕ್ಸಿಟ್ ಪೋಲ್ ವಿಚಾರ ಸಂಬಂಧ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಂದಿದೆ. ಅಂತಾ ಹೇಳಿದೆ. ಗುಜರಾತ್ ನಲ್ಲಿ ಬಿಜೆಪಿ ಮುಂದಿದೆ ಎಂದು ಹೇಳಿದ್ದಾರೆ 8 ನೇ ತಾರೀಖು ನೋಡೋಣ. ಚುನಾವಣೇಯಲ್ಲಿ ಜನ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.
ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈಗಾಗಲೇ ಮಹಾಜನ್ ವರದಿ ಬಂದಿದೆ ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರದವರು ವರದಿ ಒಪ್ಪಲ್ಲ ಅಂದರೇ ಮಹಾರಾಷ್ಟ್ರದವರ ಪುಂಡಾಟಿಕೆಗೆ ಸರ್ಕಾರ ಹೆದರಬಾರದು. ಉತ್ತಮ ಲಾಯರ್ ಇಟ್ಟು ವಾದ ಮಾಡಲಿ. ಸಿಎಂ ಬೊಮ್ಮಾಯಿ ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ಕರೆಯಲಿಲ್ಲ ಎಂದು ಟೀಕಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy