ಹಾಸನ: ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಯಶವಂತ್ ಹಾಗೂ ಗೌರಿ ದಂಪತಿಯ ಪುತ್ರ 4 ವರ್ಷ ವಯಸ್ಸಿನ ರೋಶನ್ ಹಾವು ಕಡಿತದಿಂದ ಸಾವನ್ನಪ್ಪಿದ ಬಾಲಕನಾಗಿದ್ದು, ಹಾವು ಕಚ್ಚಿದ ವೇಳೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ಮಕ್ಕಳನ್ನು ಕರೆತರಲು ಅಂಗನವಾಡಿ ಕಾರ್ಯಕರ್ತೆ ಹೊರಗೆ ಹೋದ ವೇಳೆ ಅಂಗನವಾಡಿಯ ಆವರಣದಲ್ಲಿದ್ದ ಹಾವು ಬಾಲಕನಿಗೆ ಕಚ್ಚಿದೆ. ತಕ್ಷಣವೇ ಬೈಕ್ ನಲ್ಲಿ ಬಾಲಕನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್ ಮೂಲಕ ಸಾಗಿಸಲಾಗಿದೆ. ಬಳಿಕ ವೈದ್ಯರ ಸಲಹೆಯಂತೆ ಸಕಲೇಶಪುರ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಬೈಕ್ ಅರ್ಧ ದಾರಿ ತಲುಪುವ ವೇಳೆ ಆ್ಯಂಬುಲೆನ್ಸ್ ಬಂದಿದೆ. ಆದರೆ, ಬಾಲಕ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz