ಪಾವಗಡ: ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂದಿಸಿದ ಎಲ್ಲಾ ವೈದ್ಯಕೀಯ ಸೇವೆಗಳನ್ನು, ಸಮಾಜ ಸೇವಾ ಸಂಸ್ಥೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರು ಒಂದೇ ಸೂರಿನಡಿ ಸಿಗುವಂತೆ ಮಾಡಿ ಗ್ರಾಮೀಣ ಜನರಿಗೆ ಅರೋಗ್ಯ ಮೇಳವನ್ನು ನಡಿಸುತ್ತಿರುವುದು ಉಪಯೋಗಕಾರಿ ಸೇವಾ ಕಾರ್ಯ ಎಂದು ಸ್ಥಳೀಯ ಮುಖಂಡರಾದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಲ್. ಎಸ್. ನರಸರೆಡ್ಡಿ ಹೇಳಿದರು.
ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಹೆಲ್ಪ್ ಸೊಸೈಟಿ ಪಾವಗಡ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಅರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ದೈಹಿಕ ಶಿಕ್ಷಕರಾದ ಸಣ್ಣರಾಮರೆಡ್ಡಿ ಮಾತನಾಡುತ್ತ ಇಂತಹ ಅರೋಗ್ಯ ಮೇಳದಿಂದ ಆರ್ಥಿಕವಾಗಿ ಆಶಕ್ತ ರಗಿರುವವರಿಗೆ ಪ್ರಯೋಜನವಾಗಲಿದೆ ಎಂದರು.
ಆಸರೆ ಫೌಂಡೇಶನ್ ಸದಸ್ಯರಾದ ಅಮಿಲಿನೇನಿ ನರಸಿಂಹಮೂರ್ತಿ ಮಾತನಾಡುತ್ತ ದೈನಂದಿನ ಬದುಕಿನ ಒತ್ತಡಗಳು ಹಾಗೂ ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ನಮ್ಮನ್ನು ಕಾಡುತ್ತಿದ್ದು ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೆ ಉತ್ತಮ ಅರೋಗ್ಯದಿಂದಿರಲು ಸಾಧ್ಯ ಎಂದರು.
ಶಿಬಿರದ ಪ್ರಾಯೋಜಕರಾದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡುತ್ತ ನಾವು ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ರಾಸಾಯನಿಕ ವಸ್ತುಗಳ ಹೆಚ್ಚಿನ ಬಳಕೆಯಿಂದ ಕ್ಯಾನ್ಸರ್, ಕಿಡ್ನಿ, ರೋಗದಂತಹ ಮಾರಕ ಕಾಯಿಲೆಗಳು ಕಂಡು ಬರುತ್ತಿದ್ದು ಇದರಿಂದ ಹೆಲ್ಪ್ ಸೊಸೈಟಿ ಸಂಸ್ಥೆ ವತಿಯಿಂದ ತಾಲೂಕಿನದ್ಯಂತ ಇಂತಹ ಶಿಬಿರಗಳನ್ನು ವಾರಕ್ಕೊಮ್ಮೆ ಏರ್ಪಡಿಸುತ್ತಿದ್ದೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ತಮ್ನ ಆರೋಗ್ಯದ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.
ಈ ಶಿಬಿರದಲ್ಲಿ 450 opd ಮತ್ತು ಶಸ್ತ್ರಚಿಕಿತ್ಸೆಗೆ 38 ಒಳಪಟ್ಟಿದ್ದು, ಶಿಬಿರದ ಕಾರ್ಯಕ್ರಮದಲ್ಲಿ ಈ ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಹರೀಶ್, ಡಾಕ್ಟರ್ ಗ್ರೀಷ್ಮಾ , ಡಾಕ್ಟರ್ ಗಗನ, ಆನಂದ್, PRO ದರ್ಶನ್, ಸಂದೀಪ್, ಶಿಬಿರಕ್ಕೆ ಪೂರ್ತಿ ಸಹಕಾರ ನೀಡಿದ ವೀರೇಶ್,ಗ್ರಾಮ ಪಂಚಾಯಿತಿ ಸದಸ್ಯ ವೇಣುಗೋಪಾಲರೆಡ್ಡಿ, ಮದನ್, ನರಸಿಂಹ ರೆಡ್ಡಿ, ಶ್ರೀರಾಮ ರೆಡ್ಡಿ, ಹನುಮೇಶ್, ಲೋಕೇಶ್, ಧನಂಜಯ್, ಹೆಲ್ಪ್ ಸೊಸೈಟಿಯ ಸದಸ್ಯರಾದ ಸಾಗರ್, ರಾಕೇಶ್, ಪ್ರಸನ್ನ ಇನ್ನು ಮುಂತಾದರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296