ಹೆಬ್ಬೂರು: ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ & ಶ್ರೇಷ್ಟ ದಾರ್ಶನಿಕರಾದ ಮಹರ್ಷಿ ವಾಲ್ಮೀಕಿ ರವರ ಕಂಚಿನ ಪುತ್ಥಳಿ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಹೆಬ್ಬೂರಿನಲ್ಲಿ ನಡೆಯಿತು.
ಭೂಮಿ ಪೂಜೆ ಕಾರ್ಯಕ್ರಮಕ್ಕೆ ವಾಲ್ಮೀಕಿ ಮಹಾಸಂಸ್ಥಾನ ಮಠ ಸುಕ್ಷೇತ್ರ ಶಿಡ್ಲೆಕೋಣದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸಂಜಯಕುಮಾರನಂದ ಸ್ವಾಮೀಜಿ, ಇಸ್ಲಾಂ ಸಮುದಾಯದ ಧರ್ಮಗುರುಗಳು ಹಾಗೂ ವೆಂಕಟಹನುಮಯ್ಯ ನವರು ಹಾಗೂ ಇನ್ನು ಹಲವಾರು ಗಣ್ಯರು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ರವರ ಪುತ್ಥಳಿಯ ಗುದ್ದಲಿ ಪೂಜೆಯನ್ನು ಮಾಡಬಾರದು ಎಂದು ತುಮಕೂರು ತಾಲೂಕಿನ EO ಹರ್ಷರವರು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಸುಮಾರು 3/4 ಗಂಟೆಗಳ ಕಾಲ ಅಡಚಣೆ ಮಾಡಿರುತ್ತಾರೆ, ಆದರೂ ಸಹ ಇಂತಹ ಬೆದರಿಕೆಗಳಿಗೆಲ್ಲ ಬೆದರುವುದಿಲ್ಲ ಎಂದ ಹೋರಾಟಗಾರರು ಗುದ್ದಲಿ ಪೂಜೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4