ಚಳಿಗಾಲದಲ್ಲಿ ತೂಕ ಇಳಿಸಲು ಈ ಟಿಪ್ಸ್ ಬಳಸಿ:
ಶೀತಕಾಲದಲ್ಲಿ ಹೆಚ್ಚಿನ ಆಹಾರ ಸೇವನೆ ಮಾಡುತ್ತೇವೆ. ಅದರಲ್ಲೂ ಕರಿದ ತಿಂಡಿಗಳ ಸೇವನೆ ಬಯಕೆ ಹೆಚ್ಚಾಗುತ್ತದೆ. ಹಾಗಾಗಿ ಈ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ತೂಕ ಇಳಿಕೆಗೆ ಸಹಾಯವಾಗುತ್ತದೆ. ವಾಕಿಂಗ್, ಜಾಗಿಂಗ್ಗೆ ಹೆಚ್ಚಿನ ಒತ್ತು ನೀಡಿ. ಹೊರ ಹೋಗಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ವ್ಯಾಯಾಮ ಮಾಡಿ. ಸಕ್ಕರೆ, ಕೊಬ್ಬು, ಕರಿದ ಆಹಾರಗಳಿಂದ ದೂರವಿರಿ. ಸೊಪ್ಪು ತರಕಾರಿಗಳನ್ನು ಸೇವನೆ ಮಾಡಿ. ಇದರಿಂದ ತೂಕನಷ್ಟಕ್ಕೆ ಸಹಾಯವಾಗುತ್ತದೆ.
ಬೆಳಿಗ್ಗೆ ರಾಗಿ ಅಂಬಲಿ ಕುಡಿಯುವುದರಿಂದ ಇದೆ ಇಷ್ಟೊಂದು ಲಾಭಗಳು..!
ಬೆಳಗಿನ ಉಪಾಹಾರವಾಗಿ ರಾಗಿ ಅಂಬಲಿಯನ್ನು ಸೇವಿಸುವುದು ತುಂಬಾ ಪ್ರಯೋಜನಗಳಿವೆ. ರಾಗಿ ಅಂಬಲಿ ಕುಡಿದರೆ ದಿನವಿಡೀ ತುಂಬಾ ಉತ್ಸುಕರಾಗಿರುತ್ತೀರಿ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಪ್ರತಿನಿತ್ಯ ರಾಗಿ ಅಂಬಲಿ ಕುಡಿಸಿದರೆ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ದೇಹದ ಉಷ್ಣತೆಯಿಂದ ಬಳಲುತ್ತಿರುವವರಿಗೆ ರಾಗಿ ಅಂಬಲಿ ದಿವ್ಯೌವಷಧ ಎನ್ನುತ್ತಾರೆ ತಜ್ಞರು. ರಾಗಿ ಅಂಬಲಿಯಲ್ಲಿರುವ ಪ್ರೋಟೀನ್ ಗಳು ದೈಹಿಕ ಶಕ್ತಿಗೂ ಸಹಕಾರಿ. ಪ್ರತಿದಿನ ರಾಗಿ ಅಂಬಲಿಯನ್ನು ಆಹಾರದ ಭಾಗವಾಗಿ ಮಾಡಿಕೊಂಡರೆ ಕಾಲುಗಳು ಮತ್ತು ತೋಳುಗಳು ಬಲಗೊಳ್ಳುತ್ತವೆ.