ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ .
18 ದಿನಗಳ ನಂತರ ತೀರ್ಪು ಹೊರಬದ್ದಿದೆ. ಸಿಜೆ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ 11 ದಿನಗಳ ಸುದೀರ್ಘ ವಿಚಾರಣೆ ಬಳಿಕ ಫೆಬ್ರವರಿ 25ರಂದು ವಿಚಾರಣೆ ಅಂತ್ಯಗೊಳಿಸಿತ್ತು.
ಅರ್ಜಿದಾರರ ಪರ ದೇವದತ್ ಕಾಮತ್, ಮಹಮ್ಮದ್ ತಾಹೀರ್, ರವಿವರ್ಮ ಕುಮಾರ್, ಎ.ಎಂ.ಧರ್, ವಿನೋದ್ ಕುಲಕರ್ಣಿ ಸೇರಿ 8ಕ್ಕೂ ಹೆಚ್ಚು ವಕೀಲರು ವಾದ ಮಂಡಿಸಿದ್ದರು. ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ, ಶಾಲಾ ಆಡಳಿತ ಮಂಡಳಿ ಪರ ಸಜ್ಜನ್ ಪೂವಯ್ಯ ಸೇರಿ 5 ವಕೀಲರು ವಾದ ಮಂಡಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB