ತುಮಕೂರು: ತುಮಕೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಡನ್ನು ಹಾಡಿ ಜನರನ್ನು ರಂಜಿಸಿದರು.
ಕನ್ನಡ ಚಲನಚಿತ್ರ ಗಾಯನವಾದ ‘ಕಾಣದಂತೆ ಮಾಯವಾದನು ಶಿವ’ ಎಂಬ ಹಾಡನ್ನು ಹಾಡಿದರು. ತುಮಕೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು ಹಾಡಿದ ವೇಳೆ ಗಾಯಕ ವಿಜಯಪ್ರಕಾಶ್ ಹಾಡಿದ ಹಾಡಿಗೆ ಧ್ವನಿಗೂಡಿಸಿದರು.
ಮೊದಲ ಬಾರಿ ಜಿಲ್ಲಾಡಳಿತದಿಂದ ತುಮಕೂರು ದಸರಾ ಆಯೋಜನೆ ಮಾಡಲಾಗಿದ್ದು ಅಭಿಮಾನಿಗಳ ಒತ್ತಾಯಕ್ಕೆ ಗೃಹ ಸಚಿವ ಪರಮೇಶ್ವರ್ ಹಾಡು ಹಾಡಿದರು.
ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿಯೂ ಹೆಜ್ಜೆ ಹಾಕಿದ ಸಚಿವ ಪರಮೇಶ್ವರ್, ದಂಪತಿ ಸಮೇತ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದರು.
ಜಂಬೂಸವಾರಿ ದಸರಾ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಪರಮೇಶ್ವರ್, ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಹೆಜ್ಜೆ ಹಾಕಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q