ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿದ್ದರೆ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಶೋಧನೆಗಳು ಬಹಿರಂಗ ಪಡಿಸಿವೆ. ಬಹುತೇಕ ಜನರಿಗೆ ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕೆಂಬುದರ ಬಗ್ಗೆ ಗೊಂದಲಗಳೂ ಇವೆ.
ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿ ತನ್ನ ವಯಸ್ಸಿಗೆ ಅನುಗುಣವಾಗಿ ನಿದ್ರೆ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಾಗಲಿವೆ ಎನ್ನುತ್ತಾರೆ. ಹಾಗಾದ್ರೆ ಯಾವ ವಯಸ್ಸಿನವರು ಎಷ್ಟು ಗಂಟೆ ಕಾಲ ನಿದ್ರಿಸಬೇಕು?
ನವಜಾತ ಶಿಶು:ನವಜಾತ ಶಿಶುಗಳು ದಿನಕ್ಕೆ 14 ರಿಂದ 17 ಗಂಟೆ ಕಾಲ ನಿದ್ರೆ ಮಾಡಬೇಕು.
4 ರಿಂದ 11 ತಿಂಗಳ ಮಗು:12 ರಿಂದ 15 ಗಂಟೆ ಕಾಲ ನಿದ್ರಿಸಬೇಕು.
1 ರಿಂದ 2 :1 ರಿಂದ 2 ವರ್ಷದ ಮಕ್ಕಳು ಪ್ರತಿದಿನ 11 ರಿಂದ 14 ಗಂಟೆ ಕಾಲ ನಿದ್ರೆ ಮಾಡಬೇಕು.
3 ರಿಂದ 5:ಈ ಪ್ರಾಯದವರು ಪ್ರತಿದಿನ 10 ರಿಂದ 13 ಗಂಟೆ ಕಾಲ ನಿದ್ರೆ ಮಾಡಬೇಕು.
6 ರಿಂದ 13 ವರ್ಷ:ಈ ಪ್ರಾಯದ ಮಕ್ಕಳು 9 ರಿಂದ 11 ಗಂಟೆ ನಿದ್ರೆ ಮಾಡಬೇಕು ಕನಿಷ್ಠ 7 ಗಂಟೆಯಾದ್ರೂ ನಿದ್ರಿಸಬೇಕು.
26 ರಿಂದ 64:ಈ ಪ್ರಾಯದವರು ಪ್ರತಿದಿನ 7 ರಿಂದ 9 ಗಂಟೆ ನಿದ್ರೆ ಮಾಡಬೇಕು. ಕನಿಷ್ಠ 6 ಗಂಟೆ ಕಾಲವಾದ್ರೂ ನಿದ್ರಿಸಬೇಕು.
ನ್ಯಾಷನಲ್ ಸ್ಲೀಪ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು, ಕನಿಷ್ಠ ಅಂದರೆ 5 ರಿಂದ 6 ಗಂಟೆಯಾದ್ರೂ ಮಲಗಲೇಬೇಕು. ಏಕಕಾಲದಲ್ಲಿ ನಿದ್ರೆ ಬಾರದೇ ಇದ್ದಲ್ಲಿ ತಮ್ಮ ನಿದ್ರೆಯ ಅವಧಿಯನ್ನು ಎರಡು ಹಂತಗಳಲ್ಲಿ ವಿಭಜಿಸಿಕೊಳ್ಳಬಹುದಾಗಿದೆ. ಹಗಲಿನಲ್ಲಿ 2 ಗಂಟೆ ಮತ್ತು ರಾತ್ರಿ ಹೊತ್ತಲ್ಲಿ 6 ಗಂಟೆ ಕಾಲ ನಿದ್ರೆ ಮಾಡಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA