ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗಾಗಿ ಜನವರಿ 9ರಂದು ತುಮಕೂರು ವಿಶ್ವವಿದ್ಯಾನಿಲಯದ ಸದಾನಂದಮಯ್ಯ ಬ್ಲಾಕ್ ನಲ್ಲಿ ‘ಬೃಹತ್ ಉದ್ಯೋಗ ಮೇಳ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ತುಮಕೂರು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ, ಉದ್ಯೋಗ ಮೇಳದ ಪ್ರಯೋಜನವನ್ನು ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.0816-2278488 / 2255652, ಮೊ.ಸಂ. 9071021143, 9513136642, 9035549147, 9900412819, 9972131971, 9448989874, 8123503008ನ್ನು ಸಂಪರ್ಕಿಸಬಹುದಾಗಿದೆ.
ಮೇಳದಲ್ಲಿ ಎಂ.ಎಸ್ಸಿ ಕೆಮಿಸ್ಟ್ರಿ–4 ಹುದ್ದೆ; ಎಂ.ಕಾಂ. ಮತ್ತು ಎಂ.ಬಿ.ಎ-200; ಎಂ.ಫಾರ್ಮ–55; ಎಂ.ಎ.ಬಿಎಡ್./ ಎಂ.ಎಸ್.ಸಿ.ಬಿಎಡ್–15; ಬಿ.ಇ.(ಮೆಕ್ಯಾನಿಕಲ್, ಇಇಇ, ಸಿವಿಲ್, ಇಸಿಇ, ಸಿಎಸ್)-154; ಬಿ.ಎ., ಬಿ.ಕಾಂ. ಬಿ.ಎಸ್ಸಿ, ಬಿ.ಸಿ.ಎ., ಬಿ.ಬಿ.ಎಂ., ಬಿ.ಫಾರ್ಮ್–1140; ಡಿಪ್ಲೋಮಾ(ಮೆಕ್ಯಾನಿಕಲ್, ಇಇಇ, ಇಸಿಇ, ಸಿಎಸ್, ಟೂಲ್ ಅಂಡ್ ಡೈ ಮೇಕಿಂಗ್, ಐಟಿಐ(ಯಾವುದೇ ಟ್ರೇಡ್))–657; ಎಸ್.ಎಸ್.ಎಲ್.ಸಿ./ಪಿಯುಸಿ–1010 ಹುದ್ದೆ ಸೇರಿದಂತೆ ಸುಮಾರು 3535 ಹುದ್ದೆಗಳ ಭರ್ತಿ ಹಾಗೂ ದೈಹಿಕ ವಿಕಲಚೇತನರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx