nammatumakuru

    Subscribe to Updates

    Get the latest creative news from FooBar about art, design and business.

    What's Hot

    80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!

    August 15, 2026

    ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ

    August 15, 2026

    ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್

    August 15, 2026
    Facebook Twitter Instagram
    ಟ್ರೆಂಡಿಂಗ್
    • 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
    • ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
    • ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್
    • ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ
    • ಸ್ವಾತಂತ್ರ್ಯ ದಿನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ನಮ್ಮೆಲ್ಲರ ಹಬ್ಬ: ಪ್ರಾಂಶುಪಾಲ ಡಾ.ಶಶಿಕುಮಾರ್ ಎಚ್.ಸಿ.
    • ಮಹಾರಾಜವಾಡಿಯಲ್ಲಿ ಅದ್ಧೂರಿಯಾಗಿ ಜರುಗಿದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
    • ತುಮಕೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ — ಶ್ರೀಮಠ ಹಾಗೂ ಕ್ರೀಡಾಂಗಣದಲ್ಲಿ ಡಾ.ಜಿ.ಪರಮೇಶ್ವರ್ ಧ್ವಜಾರೋಹಣ
    • ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ
    ಚಿಕ್ಕನಾಯಕನಹಳ್ಳಿ October 23, 2025

    ಹುಳಿಯಾರು | ರೈತರ ಶಾಪ ನಿಮಗೆ ತಟ್ಟದೇ ಇರಲಾರದು: ಅಧಿಕಾರಿಗಳಿಗೆ ಸಬ್ಬೇನಹಳ್ಳಿ ಶ್ರೀನಿವಾಸ್ ಹಿಡಿಶಾಪ

    By adminOctober 23, 2025No Comments2 Mins Read
    huliyaru

    ಹುಳಿಯಾರು: ನೀವೆಲ್ಲಾ ಮನೆಯಲ್ಲಿ ಬೆಚ್ಚಗೆ ಇದ್ದು, ರೈತರನ್ನು ಮನೆಮಠ ಬಿಟ್ಟು ಅಹೋರಾತ್ರಿ ಧರಣಿ ಕೂರುವಂತೆ ಮಾಡಿದ್ದೀರಲ್ಲಾ, ಇದೇ ಏನು ರೈತರಿಗೆ ನೀವು ಕೊಡುವ ಗೌರವ? ರೈತರೇನು ಮಹಾ ಕೇಳಬಾರದನ್ನು ಕೇಳಿದ್ದಾರೆ ಹೇಳಿ, ಸಂತೆಗೆ ಜಾಗ ಕೊಡಿ, ನೀರು, ಶೌಚಾಲಯ ಕೊಡಿ ಎಂದು ಕೇಳಿದ್ದಾರೆ. ಅಷ್ಟೆ, ಇಷ್ಟನ್ನೂ ಕೊಡದೆ ಮಳೆಗಾಲ, ಸಿಡಿಲುಗುಡುಗಿನ ಮಧ್ಯೆ ಕಾಲ ಕಳೆಯುವಂತೆ ಮಾಡಿದ್ದೀರಲ್ಲಾ, ಅವರ ಶಾಪ ನಿಮಗೆ ತಟ್ಟದೆ ಇರದು. ಮೊದಲು ಎಚ್ಚೆತ್ತುಕೊಂಡು ಅವರ ಕೆಲಸ ಮಾಡಿ ಕೊಡಿ ಎಂದು ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಎಚ್ಚರಿಸಿದರು.

    ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಸಂತೆ ಮೈದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 13 ನೇ ದಿನ ಪೂರೈಸಿದೆ. ಈ ದಿನ ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಧರಣಿಯಲ್ಲಿ ಕುಳಿತು ಬೆಂಬಲ ಸೂಚಿಸಿ ಮಾತನಾಡಿದರು.

    ಹುಳಿಯಾರಿನ ಉಪಮಾರುಕಟ್ಟೆಯಾದ ಚಿಕ್ಕನಾಯಕನಹಳ್ಳಿಯಲ್ಲೇ ಎಪಿಎಂಸಿಯಲ್ಲಿ ಸಂತೆ ನಡೆಯುತ್ತಿರುವಾಗ ಮುಖ ಮಾರುಕಟ್ಟೆಯಾಗಿರುವ ಹುಳಿಯಾರಿನ ಎಪಿಎಂಸಿಯಲ್ಲಿ ಏಕೆ ಸಂತೆ ನಡೆಯಬಾರದು, ಚಿಕ್ಕನಾಯಕನಹಳ್ಳಿಗೆ ಇರದ ಕಾನೂನಿನ ಅಡೆತಡೆ ಹುಳಿಯಾರಿಗೆ ಏಕೆ ಎಂದು ಪ್ರಶ್ನಿಸಿದರು.

    ನಮಗೇನು ತಿಳಿಯುವುದಿಲ್ಲ. ನಮಗೊಂದಿಷ್ಟು ಒಳ್ಳೆಯದನ್ನು ಮಾಡಿ, ಓದಿರುವ ನಿಮಗೆ ಜನರು ತಾವು ಕಟ್ಟುವ ಟ್ಯಾಕ್ಸ್‌ ನಲ್ಲಿ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಆದರೆ ಕೊಬ್ಬರಿ ಖರೀದಿ ಕೇಂದ್ರ ತೆರೆಯಲೂ ಹೋರಾಟ ಮಾಡಬೇಕು. ರಾಗಿ ಖರೀದಿ ಕೇಂದ್ರಕ್ಕೂ ಹೋರಾಟ ಮಾಡಬೇಕು. ಮಾರಿದ ನಂತರ ದುಡ್ಡು ಪಡೆಯಲೂ ಹೋರಾಟ ಮಾಡಬೇಕು. ಹೀಗಿರುವಾಗ ನಿಮ್ಮಗಳ ಅಗತ್ಯವಾದರೂ ಏಕೆಬೇಕಿತ್ತು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.

    ಚುನಾವಣೆಗಳು ಬಂದಾಗ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ನಾವೂ ಸಹ ರೈತನ ಮಕ್ಕಳೇ ಎನ್ನುತ್ತಾರೆ. ಮತಕೇಳುವಾಗ ಕಣಕ್ಕೆ ಹೋಗಿ ರೈತರ ಜೊತೆ ಕೆಲಸ ಮಾಡಿ ಓಟು ಕೇಳುತ್ತಾರೆ. ಗೆದ್ದ ನಂತರ ರೈತರ ಬೆನ್ನು ಮೂಳೆ ಮುರಿಯುತ್ತಾರೆ. ಇದಕ್ಕೆ ಹುಳಿಯಾರಿನಲ್ಲಿ 13 ದಿನಗಳ ಕಳೆದರೂ ರೈತನ ಬೇಡಿಕೆಗೆ ಸ್ಪಂದಿಸದೆ ಧರಣಿ ಮುಂದುವರೆಸುತ್ತಿರುವುದು ನಿದರ್ಶನವಾಗಿದೆ. ಈಗ ಜನರು ಬುದ್ದಿವಂತರಾಗಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜನಪ್ರತಿನಧಿಗಳನ್ನು ಚುಚ್ಚಿದರು.

    ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಟಿ.ಎಸ್.ಪ್ರಶಾಂತ್, ಮಲ್ಲೇಶಣ್ಣ, ನೀರಾ ಈರಣ್ಣ, ಓಂಕಾರಮ್ಮ, ಟಿ.ಎನ್‌ .ಶಿವಣ್ಣ, ಎನ್.ಜಿ.ರೇವಣ್ಣ, ಎಂ.ಶ್ರೀನಿವಾಸ್, ಎಚ್.ಪಿ.ಮಂಜುನಾಥ್, ಪುಟ್ಟಯ್ಯ, ಹೂವಿನತಿಮ್ಮಣ್ಣ, ಸದ್ದಾಬೋವಿ, ದುರ್ಗಾರಾಜು, ಲಕ್ಷ್ಮೀ, ಹನುಮಂತರಾಜ್ ಅರಸ್, ಮಂಜುನಾಥ್, ಶ್ರೀನಿವಾಸ್, ಶ್ರೀಧರ್, ಗಂಗಾಧರಯ್ಯ, ಸೇರಿದಂತೆ ಅನೇಕರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!

    July 31, 2026

    ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ

    July 23, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!

    August 15, 2026

    ತುಮಕೂರು: ದೇಶಾದ್ಯಂತ ಶಿಕ್ಷಣದ ಖಾಸಗೀಕರಣ, ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವುದು, ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಹೆಣ್ಣುಮಕ್ಕಳ ಮೇಲಿನ…

    ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ

    August 15, 2026

    ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್

    August 15, 2026

    ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ

    August 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.