ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೈಪರ್ ಟೆನ್ಶನ್ ದಿನಾಚರಣೆ ಮಾಡಲಾಯಿತು.
ಹಿರಿಯ ಜೀವಿಗಳಿಗೆ ಹೆಪಟೈಂಶನ್ ಬಗ್ಗೆ ಮಾಹಿತಿ ನೀಡಿ, ಬಿಪಿ, ಶುಗರ್ ಟೆಸ್ಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. (ಎನ್ ಸಿ ಡಿ) ವಿಭಾಗದ ವೈದ್ಯರಾದ ಆಶಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಂತ ವೈದ್ಯಾಧಿಕಾರಿಗಳಾದ ರೇಣುಕಾ ನಾಗರಾಳ್ಕರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನಾವು ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯಕರ ಜೀವನವನ್ನು ನಡೆಸಬಹುದು. ಯೋಗ ಮತ್ತು ಧ್ಯಾನವು ನಮಗೆ ಇದನ್ನು ಸಾಧಿಸಲು ಸಹಾಯ ಮಾಡುತ್ತದೆ. ಸದಾ ಒತ್ತಡದಿಂದ ತುಂಬಿರುವ ಇಂದಿನ ವೇಗದ ಜಗತ್ತಿನಲ್ಲಿ ಆತಂಕ ಮತ್ತು ಉದ್ವೇಗವನ್ನು ಎದುರಿಸಲು ಮತ್ತು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲು ಒಂದು ಮಾರ್ಗವನ್ನು ಕಂಡುಹಿಡಿಯುವುದು ಅತ್ಯಗತ್ಯ ಎಂದರು.
ಮಾನಸಿಕ ಆರೋಗ್ಯದ ಸಮಸ್ಯೆಗಳ ಜೊತೆಗೆ ದೈಹಿಕ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ (High Blood Pressure), ಮಧುಮೇಹ (Diabetes), ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮುಂತಾದವುಗಳಿಗೆ ಒತ್ತಡವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಟೆನ್ಷನ್ (Tension) ಅಥವಾ ಅತಿಯಾದ ಕೆಲಸವು ನಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ನಾವು ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯಕರ ಜೀವನವನ್ನು ನಡೆಸಬಹುದು. ಯೋಗ ಮತ್ತು ಧ್ಯಾನವು ನಮಗೆ ಇದನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪ್ರಮುಖರಾಗಿ ಡಾ.ಶಿವಾನಂದ್ ಜಾಜಿ, ಸುನಿತಾ, ವಿಜಯ್ ಕುಮಾರ್ ಇತರರು ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW