ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಜೀವನದ ನೋವಿನ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋನು ಗೌಡ ಅವರ ಬ್ರೇಕಪ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿತ್ತು. ಈ ಕುರಿತು ವಿಡಿಯೋ ಮಾಡಿರುವ ಅವರು ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಬ್ರೇಕಪ್ ವದಂತಿಗಳಿಗೆ ತೆರೆ ಎಳೆದಿರುವ ಸೋನು, “ನನಗೆ ಈಗ ಯಾವುದೇ ಬ್ರೇಕಪ್ ಆಗಿಲ್ಲ. ಆದರೆ ನಾಲ್ಕು ವರ್ಷಗಳ ಹಿಂದೆ ನಾನು ಯಾರನ್ನು ಪ್ರೀತಿಸುತ್ತಿದ್ದೆನೋ ಆ ವ್ಯಕ್ತಿ ಈಗ ಈ ಲೋಕದಲ್ಲಿ ಇಲ್ಲ. ಅನಾರೋಗ್ಯದ ಕಾರಣದಿಂದ ಅವರು ನಿಧನರಾಗಿದ್ದಾರೆ” ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ತೀರಿಕೊಂಡ ವ್ಯಕ್ತಿ ಮಾರ್ಚ್ 24ರಂದು ಸೋನು ಅವರಿಗೆ ಇಮೇಲ್ ಕಳುಹಿಸಿದ್ದರು ಎನ್ನಲಾಗಿದೆ. ಅದರಲ್ಲಿ “ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ನಿನಗೆ ಕರೆ ಮಾಡಿ ಮಾತನಾಡಲು ಆಗುತ್ತಿಲ್ಲ. ನನಗೆ ಏನಾದರೂ ಆದರೆ ನೀನು ನೋಡಲು ಬರಬೇಡ, ಬೇಸರ ಮಾಡಿಕೊಳ್ಳಬೇಡ. ಮುಂದಿನ ಜನ್ಮವಿದ್ದರೆ ಮತ್ತೆ ಸಿಗು, ಮಿಸ್ ಯೂ ಮುದ್ದು” ಎಂದು ಬರೆದಿದ್ದರು. ಈ ಸಂದೇಶ ಈಗ ಸೋನು ಅವರನ್ನು ವಿಪರೀತ ಕಾಡುತ್ತಿದೆ.
“ನಾವು ನಾಲ್ಕು ವರ್ಷಗಳ ಕಾಲ ಪ್ರೀತಿಸಿದ್ದೆವು. ಕೆಲವು ಕಾರಣಗಳಿಂದ ದೂರವಾಗಿದ್ದೆವು. ಅವರು ನನ್ನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದರು, ಆದರೆ ನಾನು ಅವರ ಜೊತೆ ಮಾತನಾಡಲು ಹೋಗಲಿಲ್ಲ. ಅವರು ಬದುಕಿದ್ದಾಗ ಅವರ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲವಲ್ಲ ಎಂಬ ಪಶ್ಚಾತ್ತಾಪ ನನ್ನನ್ನು ಕಾಡುತ್ತಿದೆ” ಎಂದು ಸೋನು ಹೇಳಿದ್ದಾರೆ.
ತಮ್ಮ ನೋವನ್ನು ಹಂಚಿಕೊಂಡರೆ ಜನರು ‘ಸಿಂಪಥಿ’ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಆದರೆ ತನ್ನ ಮನಸ್ಸಿನ ಫೀಲಿಂಗ್ ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಸ್ತುತ ಸೋನು ಗೌಡ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


