ಯಾವುದೇ ಕಿಡ್ನಿ ಕಾಯಿಲೆ ಇದ್ದರೆ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿರುವುದಿಲ್ಲ. ರೋಗ ಮುಂದುವರೆದಂತೆ ಅದರ ಚಿಹ್ನೆಗಳು ದೇಹದಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಮೂತ್ರಪಿಂಡದ ಕಾಯಿಲೆಯಿದ್ದರೆ ಚರ್ಮದ ಮೇಲೆ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಚರ್ಮದ ಮೇಲೆ ಕಾಣಿಸಿಕೊಳ್ಳುವ ಚಿಹ್ನೆಗಳು ದೇಹದೊಳಗೆ ಏನೋ ನಡೆಯುತ್ತಿದೆ ಎಂಬುದನ್ನು ಸೂಚನೆಯಾಗಿದೆ. ಒಣ ಚರ್ಮ, ಚರ್ಮದ ಮೇಲೆ ತುರಿಕೆ, ಚರ್ಮದ ಮೇಲೆ ದದ್ದುಗಳು ಅಥವಾ ಬಣ್ಣ ಬದಲಾವಣೆ, ಈ ರೀತಿಯ ಲಕ್ಷಣಗಳು ಕೇವಲ ಮೇಲ್ನೋಟದ ಸಮಸ್ಯೆಗಳಲ್ಲ. ಇವುಗಳು ಗಂಭೀರ ಕಿಡ್ನಿ ವೈಫಲ್ಯದ ಸಂಕೇತವಾಗಿರಬಹುದು.
ಚರ್ಮದ ಶುಷ್ಕತೆ: ಮೂತ್ರಪಿಂಡಗಳಲ್ಲಿ ಯಾವುದೇ ಸಮಸ್ಯೆಯಿದ್ದರೆ, ಒಣ ಚರ್ಮ ಸಮಸ್ಯೆ ಕಾಡುತ್ತದೆ. ಮೂತ್ರಪಿಂಡದ ಸ್ಥಿತಿ ತೀವ್ರವಾಗಿದ್ದರೆ ಚರ್ಮವು ತುಂಬಾ ಒಣಗುತ್ತದೆ, ಒರಟಾಗಿರುತ್ತದೆ ಹಾಗೂ ಬಿಗಿಯಾಗಿರುತ್ತದೆ. ಚರ್ಮದಲ್ಲಿನ ಈ ಬದಲಾವಣೆಯು ಕಿಡ್ನಿಗಳಲ್ಲಿ ಸಮಸ್ಯೆಯಿದೆ ಎಂದು ತಿಳಿಯುತ್ತದೆ. ಚರ್ಮವು ಸುಲಭವಾಗಿ ಬಿರುಕು ಬಿಡುತ್ತದೆ. ಕೆಲವು ಜನರಲ್ಲಿ ಚರ್ಮವು ಮೀನಿನ ಚರ್ಮದಂತೆ ಚಿಪ್ಪುಗಳುಳ್ಳಂತೆ ಕಾಣಲು ಆರಂಭಿಸುತ್ತದೆ.
ಚರ್ಮದಲ್ಲಿ ತುರಿಕೆ ಕಾಣಿಸುತ್ತೆ: ಕಿಡ್ನಿ ಸಮಸ್ಯೆಗಳು ಚರ್ಮದ ಮೇಲೆ ಬಹಳಷ್ಟು ತುರಿಕೆ ಉಂಟುಮಾಡುತ್ತದೆ. ತುರಿಕೆಯು ಅಲ್ಪಾವಧಿಗೆ ಮಾತ್ರವಲ್ಲ. ಈ ಸಮಸ್ಯೆ ನಿಮ್ಮನ್ನು ಹಗಲು ರಾತ್ರಿಯೂ ಕಾಡಬಹುದು. ಕೆಲವರಲ್ಲಿ ನಿದ್ರೆಯ ಕೊರತೆ ಮತ್ತು ಜೀವನಶೈಲಿ ಹದಗೆಡಲು ಆರಂಭಿಸುತ್ತದೆ. ನಿರಂತರ ತುರಿಕೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಸೂಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮೂತ್ರಪಿಂಡಗಳನ್ನು ಅಪಾಯಕ್ಕೆ ಸಿಲುಕಿಸಬಹುದು.
ಚರ್ಮದ ದಪ್ಪವಾಗುವುದು, ಗೀರುಗಳು ಕಾಣಿಸುವುದು: ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ನಿಮ್ಮ ಮೂತ್ರಪಿಂಡಗಳಲ್ಲಿ ಸಮಸ್ಯೆ ಇದ್ದರೆ ತುರಿಕೆ ಉಂಟಾಗುತ್ತದೆ. ನಿರಂತರ ತುರಿಕೆಯಿಂದಾಗಿ, ಚರ್ಮವು ಗೀರುವುದು ಪ್ರಾರಂಭವಾಗುತ್ತದೆ. ಜೊತೆಗೆ, ಗುಳ್ಳೆಗಳು, ದಪ್ಪ ಚರ್ಮ ಅಥವಾ ಉಬ್ಬುಗಳು ಸಹ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಾಣಿಸಿಕೊಂಡರೂ ಸಹ ಅವುಗಳನ್ನು ನಿರ್ಲಕ್ಷಿಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಚರ್ಮದ ಬಣ್ಣದಲ್ಲಿ ಬದಲಾವಣೆ: ಯಾವುದೇ ರೀತಿಯ ಮೂತ್ರಪಿಂಡದ ಕಾಯಿಲೆ ಇದ್ದರೆ, ಚರ್ಮದ ಬಣ್ಣದಲ್ಲಿ ಬದಲಾಗುತ್ತದೆ. ಮೂತ್ರಪಿಂಡಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಚರ್ಮದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ. ಇದರಿಂದ ಚರ್ಮ ಹಳದಿ, ಬೂದು ಅಥವಾ ಕಂದು ಬಣ್ಣಕ್ಕೆ ತರುತ್ತದೆ. ತುರಿಕೆಯಿಂದ ಗೀರುವುದು ಚರ್ಮದ ಮೇಲೆ ದಪ್ಪ, ಹಳದಿ ಅಥವಾ ಗಟ್ಟಿಯಾದ ಪ್ರದೇಶಗಳಿಗೆ ಕಾರಣವಾಗುತ್ತದೆ.
ಚರ್ಮದಲ್ಲಿ ಊತ: ಕಿಡ್ನಿಗಳಲ್ಲಿ ಸಮಸ್ಯೆಯಿದ್ದರೆ, ಅವು ದೇಹದಿಂದ ಹೆಚ್ಚುವರಿ ದ್ರವ ಮತ್ತು ಉಪ್ಪನ್ನು ತೆಗೆದುಹಾಕಲು ಸಾಧ್ಯವಿಲ್ಲ. ಪಾದಗಳು, ಕಣಕಾಲುಗಳು, ಕೈಗಳು, ಮುಖ ಅಥವಾ ಕಣ್ಣುರೆಪ್ಪೆಗಳ ಸುತ್ತಲೂ ಊತವನ್ನು ಉಂಟುಮಾಡಬಹುದು.
ಚರ್ಮದ ಮೇಲೆ ದದ್ದು: ಮೂತ್ರಪಿಂಡಗಳಲ್ಲಿ ತೊಂದರೆಯಾದರೆ ಚರ್ಮದ ಮೇಲೆ ಸಣ್ಣ ಗುಮ್ಮಟಾಕಾರದ ಚಿಪ್ಪುಗಳುಳ್ಳ ದದ್ದುಗಳು ಕಾಣಿಸುತ್ತದೆ. ಇವು ತುಂಬಾ ತುರಿಕೆಯಾಗುತ್ತದೆ. ಚರ್ಮದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹದಿಂದ ಇವು ಕಾಣಿಸಿಕೊಳ್ಳುತ್ತವೆ.
ವಿ.ಸೂ.: ಇಲ್ಲಿ ನೀಡಲಾಗಿರುವ ಆರೋಗ್ಯ ಮಾಹಿತಿ, ಕೇವಲ ಮಾಹಿತಿಗಾಗಿ. ಅಂತರ್ಜಾಲಗಳಿಂದ ಸಂಗ್ರಹಿಸಲಾದ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಯಾವುದೇ ವಿವರಗಳನ್ನು ತಿಳಿದುಕೊಳ್ಳಬೇಕಾದರೆ ನುರಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC