ತುಮಕೂರು: ನಟ ದರ್ಶನ್ ಅವರು ಗುರು ರಾಘವೇಂದ್ರ ಸನ್ನಿದಾನದಲ್ಲಿ ಗೋಮಾತೆ ಪೂಜೆ ನೆರವೇರಿಸಿದರೆ ದೋಷ ನಿವಾರಣೆ ಆಗಲಿದೆ ಎಂದು ತುಮಕೂರಿನ ಮೂಕಾಂಬಿಕೆ ದೇವಿಯ ಉಪಾಸಕರಾಗಿರುವ ಡಾ.ಲಕ್ಷ್ಮೀಕಾಂತ ಆಚಾರ್ಯ ಭವಿಷ್ಯ ನುಡಿದಿದ್ದಾರೆ.
ದರ್ಶನ್ ಜಾಮೀನು ಬಗ್ಗೆ ಭವಿಷ್ಯ ಹೇಳಿದ್ದ ಮೂಕಾಂಬಿಕೆ, ಮೂಕಾಂಬಿಕೆ ಭವಿಷ್ಯ ನುಡಿದ ದಿನವೇ ದರ್ಶನ್ ಗೆ ಜಾಮೀನು ಸಿಕ್ಕಿತ್ತು. ರಾಯರ ದರ್ಶನ ಮಾಡಿದ್ರೆ ಒಳಿತು.ದರ್ಶನ್ ಗೆ ರಾಯರ ಅನುಗ್ರಹವಾಗಬೇಕಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ದರ್ಶನ್ ನಿರ್ಲಕ್ಷ್ಯ ಮಾಡಬಾರದು. ರಾಯರ ಸನ್ನಿದಿಯಲ್ಲಿ ಗೋಪೂಜೆ ಮಾಡಿದ್ರೆ ಆರೋಗ್ಯ ಸರಿ ಹೋಗುತ್ತೆ. 2027ರವರೆಗೂ ದರ್ಶನ್ ಗೆ ತೊಂದರೆ ತಪ್ಪಿದಲ್ಲ. 2027ರ ನಂತರ ಬದಲಾವಣೆ ಆಗಲಿದೆ ಎಂದಿದ್ದಾರೆ. ಸಿನಿಮಾ ಕೆರಿಯರ್ ಬಗ್ಗೆ ಸ್ವಲ್ಪದಿನ ಕಾಯಬೇಕಿದೆ ಎಂದಿದ್ದಾರೆ.
ನಟ ದರ್ಶನ್ ಗೆ ಗುರುದೋಷ ಇದೆ. ದೋಷ ನಿವಾರಣೆ ಮಾಡಿಕೊಂಡ್ರೆ ಮಾತ್ರ ಆರೋಗ್ಯ ಸುಧಾರಣೆ ಆಗಲಿದೆ. ದರ್ಶನ್ ಗೆ ಗುರು ರಾಯರ ಆಶೀರ್ವಾದ ಬೇಕಿದೆ. ದರ್ಶನ್ ಆರೋಗ್ಯದ ಬಗ್ಗೆ ಮೂಕಾಂಬಿಕೆ ದೇವಿ ಸೂಚನೆ ನೀಡಿತ್ತು. ಈಗ ದರ್ಶನ ಆರೋಗ್ಯ ಹಾಗೂ ಸಿನಿ ಕೆರಿಯರ್ ಬಗ್ಗೆ ಡಾ.ಲಕ್ಷ್ಮೀಕಾಂತ ಆಚಾರ್ಯ ಭವಿಷ್ಯ ನುಡಿದಿದ್ದರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q