ತುರುವೇಕೆರೆ: ಅಂತರ್ಜಲ ಮಟ್ಟ ಕುಸಿಯುತ್ತಿದ್ದರೂ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ನಡೆಯುತ್ತಿರುವ ಘಟನೆ ತುರುವೇಕೆರೆ ತಾಲೂಕಿನ ಸೂಳೆಕೆರೆ ಕೆರೆಯಲ್ಲಿ ನಡೆಯುತ್ತಿದೆ.
ಹಾಡಹಗಲೇ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕಾಗಿ ಹತ್ತಾರು ಇಟಾಚಿ, 50ಕ್ಕೂ ಹೆಚ್ಚು ಜೆಸಿಬಿ, ನೂರಾರು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದೆ. ಅಧಿಕಾರಿಗಳ ಕಣ್ಣ ಮುಂದೆಯೇ ಇಷ್ಟೆಲ್ಲ ಘಟನೆಗಳು ನಡೆದರೂ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಹೇಮಾವತಿ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಹೆಸರಿನಲ್ಲಿ ನಡೆಯುತ್ತಿರುವ ಈ ಗಣಿಗಾರಿಕೆಯ ದಂಧೆಯಲ್ಲಿ ಅಧಿಕಾರಿಗಳು ಕಮಿಷನ್ ಪಡೆಯುತ್ತಿದ್ದಾರೋ ಎಂಬ ಅನುಮಾನದ ಸಾರ್ವಜನಿಕ ವಲಯದಲ್ಲಿ ಮೂಡಿದೆ . ಸಾರ್ವಜನಿಕರು ಹೇಳುವಂತೆ ತುರುವೇಕೆರೆ ತಾಲೂಕಿಗೆ ಮಾತ್ರವಲ್ಲದೆ ಬೇರೆ ತಾಲೂಕಿಗೂ ಟಿಪ್ಪರ್ ಲಾರಿಗಳ ಮುಖಾಂತರ ಮಣ್ಣು ರವಾನೆಯಾಗುತ್ತಿರುವ ಬಗ್ಗೆ ಅನುಮಾನವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಈ ಗಣಿಕಾರಿಕೆಗೆ ಸಂಬಂಧಪಟ್ಟ ಅಧಿಕಾರಗಳು ಸೂಳೆಕೆರೆಯತ್ತ ಗಮನಹರಿಸಿ ಕೆರೆಯ ಒಡಲನ್ನು ಉಳಿಸಬೇಕಾಗಿದೆ.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA