ಮಾಸ್ ಡೈಲಾಗ್ ಗಳಿಂದ ಮತ್ತು ಅತಿಯಾದ ಗ್ರಾಫಿಕಲ್ ಫೈಟ್ ಸೀನ್ ನಿಂದ ಹೆಚ್ಚು ಖ್ಯಾತಿ ಗಳಿಸಿರುವ ತೆಲುಗು ನಟ ಬಾಲಕೃಷ್ಣ ನಟಿ ಅಂಜಲಿ ಅವರೊಂದಿಗೆ ವೇದಿಕೆಯೊಂದರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗ್ಯಾಂಗ್ಸ್ ಆಫ್ ಗೋದಾವರಿ ‘ಸಿನಿಮಾ ಪ್ರೀ-ರಿಲೀಸ್’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ವೇದಿಕೆಗೆ ಆಗಮಿಸಿದ ವೇಳೆ ನಟಿ ನೇಹಾ ಶೆಟ್ಟಿ ಹಾಗೂ ನಟಿ ಅಂಜಲಿ ವೇದಿಕೆಯಲ್ಲಿ ನಿಂತಿದ್ದರು. ಈ ವೇಳೆ ಬಾಲಕೃಷ್ಣ ಅಂಜಲಿ ಅವರನ್ನು ಏಕಾಏಕಿ ತಳ್ಳಿದ್ದಾರೆ. ಇದರಿಂದ ಅಂಜಲಿ ಗಾಬರಿಗೊಂಡರು. ಬಳಿಕ ನಗುವಿನೊಂದಿಗೆ ಆ ಘಟನೆಯನ್ನು ಮರೆಮಾಚಿರುವ ದೃಶ್ಯಗಳು ಕಂಡುಬಂದಿದೆ. ಇದೀಗ ಬಾಲಕೃಷ್ಣರವರ ನಡವಳಿಕೆಯ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


