ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿ ಅಂತರಸನಹಳ್ಳಿ 220 ಕೆವಿ ಸ್ವೀಕರಣಾ ಕೇಂದ್ರದ 100 ಎಂವಿಎ ಸಾಮರ್ಥ್ಯದ ಪರಿವರ್ತಕವು ವಿಫಲವಾಗಿರುವುದರಿಂದ ಸದರಿ ಪರಿವರ್ತಕ ವ್ಯಾಪ್ತಿಯಲ್ಲಿರುವ ಉಪಸ್ಥಾವರಗಳಲ್ಲಿ 30 ದಿನಗಳ ಕಾಲ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತುಮಕೂರು, ಮೆಳೆಕೋಟೆ, ಬಡ್ಡಿಹಳ್ಳಿ, ಊರ್ಡಿಗೆರೆ, ಸಿಟಿಕೆರೆ, ಅಂತರಸನಹಳ್ಳಿ, ಬೆಳಧರ, ಬೆಳ್ಳಾವಿ, ಹಿರೇಹಳ್ಳಿ, ಹೊನ್ನುಡಿಕೆ, ಹೆಗ್ಗೆರೆ, ಮಲ್ಲಸಂದ್ರ, ದೊಡ್ಡಸಾರಂಗಿ, ಚೇಳೂರು, ಹಾಗಲವಾಡಿ, ಹೊಸಕೆರೆ ಹಾಗೂ ನಂದಿಹಳ್ಳಿ ಕ್ರಾಸ್ನಲ್ಲಿರುವ ಐಪಿ ಫೀಡರ್ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಲವು ಸಂದರ್ಭದಲ್ಲಿ ನಗರದ ಫೀಡರ್, ಕೈಗಾರಿಕಾ ಫೀಡರ್ ಹಾಗೂ ನಿರಂತರ ಜ್ಯೋತಿ ಫೀಡರ್ಗಳಲ್ಲಿಯೂ ಸಹ ವ್ಯತ್ಯಯ ಉಂಟಾಗಲಿದೆ.
ಸದರಿ ಪರಿವರ್ತಕವನ್ನು ದುರಸ್ತಿಗೊಳಿಸಲು ಸುಮಾರು 30 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಸಾರ್ವಜನಿಕರು/ಗ್ರಾಹಕರು/ ಕೈಗಾರಿಕೋದ್ಯಮಿಗಳು/ರೈತ ಬಾಂಧವರು ಬೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4