ತುಮಕೂರು: ತುಮಕೂರು ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2026–27ನೇ ಸಾಲಿನ 2ನೇ ವರ್ಷದ (3ನೇ ಸೆಮಿಸ್ಟರ್) ಲ್ಯಾಟರಲ್ ಎಂಟ್ರಿ ಡಿಪ್ಲೊಮಾ ಪ್ರವೇಶಾತಿ ಸಂಬಂಧ 2 ವರ್ಷಗಳ ಐಟಿಐ / ದ್ವಿತೀಯ ಪಿಯುಸಿ (ವಿಜ್ಞಾನ / ತಾಂತ್ರಿಕ) ವಿಷಯಗಳಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 20ರ ಸಂಜೆ 5 ಗಂಟೆಯೊಳಗಾಗಿ ತುಮಕೂರು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ.
ಪ್ರವೇಶಾತಿ ಪ್ರಕ್ರಿಯೆ ವಿವಿಧ ಹಂತ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8310068320, 9844434206, 9008106036, ದೂ.ವಾ.ಸಂ. 0816–2970104 / 2006134 ನ್ನು ಸಂಪರ್ಕಿಸಬೇಕೆಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


