ಜಬಲ್ ಪುರದ ಹಿನೊಟಾ ಗ್ರಾಮವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವಿನ ಹಣ್ಣಿನ ತೋಟಗಳನ್ನು ಹೊಂದಿದೆ. ದೇಶದ ಹಲವು ರಾಜ್ಯಗಳಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಜಬಲ್ಪುರದಿಂದ 25 ಕಿ.ಮೀ. ದೂರದಲ್ಲಿರುವ ಚಾರ್ಗ್ವಾನ್ ರಸ್ತೆಯಲ್ಲಿರುವ ಹಿನೋಟಾ ಗ್ರಾಮದಲ್ಲಿ ಮಹಾಕಾಲ್ ಹೈಬ್ರಿಡ್ ಮಾವಿನ ತೋಟಗಳಿವೆ. ಈ ಹಣ್ಣುಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಾರೆ.
ಮಿಯಾಜಾಕಿ ಮಾವಿನ ಹಣ್ಣು ದುಬಾರಿಯಾಗಿರುವುದರಿಂದ ಕಳ್ಳತನ ಹೆಚ್ಚಾಗಿದೆ. ಈಗ ಸಿಸಿ ಕ್ಯಾಮೆರಾಗಳ ಜತೆಗೆ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ರಾತ್ರಿ ವೇಳೆ ಭದ್ರೆತೆಗಾಗಿ ನಾಯಿಗಳನ್ನು ಸಹ ತೋಟದಲ್ಲಿ ಬಿಡಲಾಗುತ್ತಿದೆ. ಒಂದು ವೇಳೆ ರಾತ್ರಿ ಕಳ್ಳರು ತೋಟಕ್ಕೆ ನುಗ್ಗಲು ಪ್ರಯತ್ನಿಸಿದರೆ, ಈ ನಾಯಿಗಳು ಕಳ್ಳರ ಮೇಲೆ ದಾಳಿ ಮಾಡುತ್ತವೆ.
ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಯನ್ನು ಜಪಾನ್ನ ಮಿಯಾಜಾಕಿಯಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಇದಕ್ಕೆ ಮಿಯಾಜಾಕಿ ಮಾವಿನ ಹಣ್ಣು ಎಂದು ಹೆಸರಿಡಲಾಗಿದೆ. ತನ್ನ ವಿಶಿಷ್ಟವಾದ ರುಚಿ, ಕೆನೆ ವಿನ್ಯಾಸ ಮತ್ತು ಗಾಢ ಬಣ್ಣಕ್ಕೆ ಹೆಸರುವಾಸಿಯಾಗಿರುವ ಮಿಯಾಜಾಕಿ ಮಾವಿನ ಹಣ್ಣುಗಳು ತುಂಬಾ ಅಪರೂಪವಾಗಿದ್ದು, ಪ್ರತಿ ಕೆಜಿಗೆ ಸುಮಾರು 3 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


