ಗದಗ: ಜನಪದ ಕಲೆಗಳನ್ನು ಮೈಗೂಡಿಸಿಕೊಂಡು ದೇಶ ವಿದೇಶಗಳಲ್ಲಿ ಜನಪದ ಕಲಾ ಪ್ರದರ್ಶನ ನೀಡಿದ ಬಯಲು ಸೀಮೆಯ ಜಾಲಿಗಿಡದ ಕೋಗಿಲೆ ಎಂದು ಪ್ರಸಿದ್ಧಿ ಪಡೆದ ಜನಪದ ಸಂಜೀವಿನಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಗದ್ಗುರು ಶ್ರೀ ಶಿವಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ನಡೆದ ಜಾತ್ರಾಮಹೋತ್ಸವದಲ್ಲಿ 2022ನೇ ಸಾಲಿನ “ಕಲಾ ಶ್ರೇಷ್ಠ” ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಇರಕಲ್ ಶಿವ ಶಕ್ತಿ ಪೀಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶ್ರೀ ಭಗೀರಥ ಪೀಠ ಮಹಾಸಂಸ್ಥಾನದ ಪೂ.ಜ.ಪುರುಷೋತ್ತಾಮನಂದಪುರಿ ಮಹಾಸ್ವಾಮಿಗಳು, ಕುಂಚಟಗಿ ಮಹಾಸಂಸ್ಥಾನ ಮಠದ ಪೂ.ಜ.ಡಾ.ಶಾಂತವೀರ ಮಹಾಸ್ವಾಮಿಗಳು ಹೂಸದುರ್ಗ,ಭೋವಿ ಗುರುಪೀಠದ ಪೂ.ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಶ್ರೀ ಹಡಪದ ಅಪ್ಪಣ್ಣ ಗುರುಪೀಠದ ಪೂ.ಜ.ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಶ್ರೀ ಕುಂಬಾರ ಗುರು ಪೀಠದ ಪೂ. ಬಸವ ಗುಂಡಯ್ಯಮಹಾಸ್ವಾಮಿಗಳು ,ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನದ ಮಠದ ಪೂ.ಜ.ಬಸವಮಹಾಲಿಂಗ ಮಹಾಸ್ವಾಮಿಗಳು,ಪೂಜ್ಯ ಶ್ರೀ ಯೋಗಿಶ್ವರ ಸ್ವಾಮಿ ಇರಕಲ್ ಮಠ, ಚಂದನ ಟಿವಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ಡಾ.ನಾ.ಸೋಮೇಶ್ವರ, ಮಾನವ ಕಂಪ್ಯೂಟರ್ ಖ್ಯಾತಿಯ ಶ್ರೀ ಬಸವರಾಜ ಶಂಕರ ಉಮ್ರಾಣಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ಧರು.
ವರದಿ: ಎ.ಎನ್.ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB