nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಧಿಕಾರಿಗಳ ನಿರ್ಲಕ್ಷ್ಯ, ಸಂಸದರ ಆಶ್ವಾಸನೆಯೂ ನೀರ ಮೇಲಿನ ಗುಳ್ಳೆ: ಜನಸ್ಪಂದನದಲ್ಲೂ ಸಿಗದ ನ್ಯಾಯ!

    September 2, 2026

    ಅಭಿವೃದ್ಧಿ ಮರೀಚಿಕೆಯಾದ ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ: ಭಕ್ತರ ಆಕ್ರೋಶ

    September 2, 2026

    ಸುಂಧಾಳದಲ್ಲಿ ಜಾಬ್ ಕಾರ್ಡ್ ಮೇಳ: ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜನಜಾಗೃತಿ

    September 2, 2026
    Facebook Twitter Instagram
    ಟ್ರೆಂಡಿಂಗ್
    • ಅಧಿಕಾರಿಗಳ ನಿರ್ಲಕ್ಷ್ಯ, ಸಂಸದರ ಆಶ್ವಾಸನೆಯೂ ನೀರ ಮೇಲಿನ ಗುಳ್ಳೆ: ಜನಸ್ಪಂದನದಲ್ಲೂ ಸಿಗದ ನ್ಯಾಯ!
    • ಅಭಿವೃದ್ಧಿ ಮರೀಚಿಕೆಯಾದ ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ: ಭಕ್ತರ ಆಕ್ರೋಶ
    • ಸುಂಧಾಳದಲ್ಲಿ ಜಾಬ್ ಕಾರ್ಡ್ ಮೇಳ: ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜನಜಾಗೃತಿ
    • ಸರಗೂರು ವೀರಶೈವ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಸಿ. ಮಹೇಶ್, ಉಪಾಧ್ಯಕ್ಷರಾಗಿ ಎಂ. ಶಿವಣ್ಣ ಅವಿರೋಧ ಆಯ್ಕೆ
    • ಹೀಗೂ ಉಂಟೆ …! | ಸಂಟ್ಯಾರು ಕಡೆಯುವ ಕಲ್ಲು…!
    • ತುಮಕೂರು: ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಕರೆ
    • ಮಕ್ಕಳ ಕೌಶಲ್ಯ ಪರಿಣತಿಗೆ ಮಾರ್ಗದರ್ಶನ ನೀಡಿ: ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ
    • ಸಿರಾ: ಸೆ.6: ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ವಧರ್ಮ ಸಮನ್ವತೆಯ ಜೈನಧರ್ಮ:  ಸ್ವಸ್ತಿ ಶ್ರೀ ಮೂಡುಬಿದರೆ ಭಟ್ಟಾರಕ ಶ್ರೀಗಳು
    ಜಿಲ್ಲಾ ಸುದ್ದಿ December 17, 2024

    ಸರ್ವಧರ್ಮ ಸಮನ್ವತೆಯ ಜೈನಧರ್ಮ:  ಸ್ವಸ್ತಿ ಶ್ರೀ ಮೂಡುಬಿದರೆ ಭಟ್ಟಾರಕ ಶ್ರೀಗಳು

    By adminDecember 17, 2024No Comments3 Mins Read
    jain

    ಮೂಡುಬಿದರೆ: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಸರ್ವಧರ್ಮಗಳೊಂದಿಗೆ ಸಮನ್ವಯ ಕಾಪಾಡಿಕೊಂಡು ಬರುತ್ತಿರುವ ಧರ್ಮವಾಗಿದೆ, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸುತ್ತಿದ್ದು, ಈ ಪರಿ ಬೇರೆ ಧರ್ಮದಲ್ಲಿ ಕಾಣುವುದಿಲ್ಲ ಎಂದು ಮೂಡುಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ   ಭಟ್ಟರಕ ಪಂಡಿತಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

    ಅವರಿಂದ ಮೂಡುಬಿದರೆ ಲೆಪ್ಪ ಬಸದಿಯ ಶ್ರೀ ಚಂದ್ರನಾಥ ತೀರ್ಥಂಕರ ಹಾಗೂ ಮಾತೇ ಜ್ವಾಲಾ ಮಾಲಿನಿ ಅಮ್ಮನವರ 38ನೇ ವಾರ್ಷಿಕ ಲಟ್ಟಣಿಗೆ ಅಭಿಷೇಕ, ಧಾರ್ಮಿಕ ಸಭಾ, ಕಾರ್ಯಕ್ರಮದ ಪಾವನ ಸಾನಿಧ್ಯ  ವಹಿಸಿ ಆಶೀರ್ವಚನ ನೀಡಿದರು.

    ಮೂಡುಬಿದಿರೆ ಬಾಗದಲ್ಲಿ ಶ್ರೀಮಂತ  ಮನೆತನಗಳು, ಮಠಗಳು, ರಾಜರಿದ್ದರು ಜೈನ ಧರ್ಮದ ಆಚಾರ ವಿಚಾರಗಳನ್ನು ಜನ ಗೌರವಿಸುತ್ತಿದ್ದರು, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸಿದ್ದಾರೆ ಇದೊಂದು ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿತ್ತು ಎಂದರು.

    ಮೂಡುಬಿದರೆಯಲ್ಲಿ ಜೈನ  ಧರ್ಮಕ್ಕೆ ಪುರಾತನ ಇತಿಹಾಸವಿದೆ, ಉನ್ನತವಾಗಿ ಬೆಳೆದಿದೆ, ಪುತ್ತಿಗೆ ಅರಸರು, ಪರಂಪರೆ, ಕಾವ್ಯವಾಚನ ನೀಡಿದ್ದಾರೆ  ಲೆಪ್ಪದ ಬಸದಿಗೆ ಈ ಹಿಂದೆ ವೈಭವದ ಪಂಚಕಲ್ಯಾಣಗಳು ನಡೆದಿವೆ ,ಕೆರೆ, ಕಟ್ಟೆ ಬಾವಿಗಳನ್ನು ಜನರಿಗೆ ಧಾರೆ ಎರೆದ ಜೈನ ಧರ್ಮ ಈ ಕಟ್ಟು ಕಟ್ಟಲೆಗಳನ್ನು ಕಾಪಾಡಿಕೊಂಡು ಬಂದಿದೆ ಎಂದರು .

    ಬಸದಿಗೆ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಇದು  ಜೀರ್ಣೋದ್ಧಾರಕ್ಕೆ ಮಾತ್ರ,   ಎಂದ ಭಟ್ಟಾರಕ ಶ್ರೀಗಳು, ಆಚಾರ –ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.

    ಧರ್ಮಸ್ಥಳ ಜೈನ ಧರ್ಮೀಯರಿಗೆ ತವರು ಮನೆಯಾದರೂ ಇಲ್ಲಿ ಎಲ್ಲಾ ಸಮುದಾಯದವರು ಸೇರುತ್ತಾರೆ, ಶ್ರೀ ಹರ್ಷೇಂದ್ರ  ಹೆಗಡೆಯವರು ಶಿಸ್ತಿಗೆ ಹೆಸರಾಗಿದ್ದು, ಧರ್ಮವಂತರು , ಅನುಭವ ವoತರು. ಧರ್ಮದ ಆಚರಣೆಯಿಂದ ಧರ್ಮದ ಪ್ರಭಾವನೆ ಆಗಲಿದೆ ಎಂದ ಅವರು, ಜನ ಎಷ್ಟೇ ಉನ್ನತ ಹುದ್ದೆಯವರಾದರು ಶ್ರಾವಕ ಆಚರಣೆ ಓದಬೇಕು ಶಿಬಿರಗಳು ,ವರ್ತನೆಗಳು, ಸ್ವಚ್ಛವಾಗಿರಬೇಕು ಸಂಸ್ಕಾರಗಳನ್ನು ನೀಡುವ ಕಾರ್ಯ ಧರ್ಮ ಮಾಡಬೇಕಿದೆ, ಈ ಹಿಂದೆ ಆದಿನಾಥ, ಮಹಾವೀರ ಹಾಗು ಚಂದ್ರನಾಥ ತೀರ್ಥಂಕರರು ಧರ್ಮಗಳನ್ನು ದಾರೆದಿದ್ದಾರೆ ಎಂದರು.

    ಸ್ವಯಂಸೇವಕರಾಗಿ ದುಡಿದಾಗ, ಆತ್ಮಾವಲೋಕ ಲೋಕನ ಮಾಡಿಕೊಂಡಾಗ ಬಸದಿಗಳು ಸ್ವಚ್ಛವಾಗಲಿವೆ ಎಂದರು.  ಶ್ರಾವಕರು ,ಪುರೋಹಿತರು ಎರಡು ಕಣ್ಣುಗಳಿದ್ದಂತೆ. ಬಸದಿಗಳ ರಕ್ಷಣೆಗೆ ಸ್ವಚ್ಛತೆ ಕೈಗೊಳ್ಳಬೇಕು,  ಕೀಳಿರಿಮೆ ಮಾಡದೆ ಕರ್ತವ್ಯಗಳನ್ನು ಅಳವುಡಿಸಿಕೊಂಡು,ಕಟ್ಟು–ಕಟ್ಟಲೆಗಳನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.

    ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಧರ್ಮ ಸಾಮ್ರಾಜ್ಯದ   ಹಿಂದಿನ ನೆನಪುಗಳನ್ನು ಮಲಕು ಹಾಕಿ, ಮೂಡುಬಿದರೆ ಇದೊಂದು ದೈವತ್ವದ ನೆಲೆ ,ಧರ್ಮಭೂಮಿ , ಈಗಿರುವ ಬಸದಿಗಳಲ್ಲಿ ಪೂಜೆ ಆಗುವಂತೆ ಮಾಡಿ , ಸ್ವಚ್ಛತೆ ಕಾಪಾಡುವುದು ಅಗತ್ಯ. ಬಸದಿಗಳಲ್ಲಿ ಪುರೋಹಿತರುಗಳ ಕೊರತೆ ಇದೆ ಎಂದ ಅವರು,  ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಸರ್ಕಾರ  50 ಲಕ್ಷ ಬಿಡುಗಡೆ ಮಾಡಿದೆ ಎಂದರು.

    ಸಮುದಾಯ ಭವನ, ಬಸದಿಗಳ  ಜೀರ್ಣೋದ್ಧಾರ ವೇಣೂರು ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ.ಗಳನ್ನು ನೀಡಿದೆ, ಸರ್ಕಾರಕ್ಕೆ ತೆರಿಗೆ ಪಾವತಿಸುವಲ್ಲಿ ಜೈನ ಸಮುದಾಯ ಮೊದಲಿಗರು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಸಿಂಡಿಕೇಟ್ ನ ಮಾಜಿ ಸದಸ್ಯ ಕೆ. ಸುರೇಶ್ ಬಲ್ಲಾಳ್ ಮಾತನಾಡಿ ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಹಲವಾರು ಜೈನ ಬಸದಿಗಳು ದೇವಸ್ಥಾನಗಳಾಗಿವೆ ಎಂದರು .ಈ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಬಸದಿಗಳಿದ್ದವು ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಹರ್ಷೇಂದ್ರ ಹೆಗಡೆ ಮಾತನಾಡಿ, ಕ್ಷೇತ್ರದಲ್ಲಿ ಅನ್ನದಾನ, ವಸ್ತ್ರದಾನ ,ವಿದ್ಯಾದಾನ ಮಾಡಿದ್ದು ಅಭಯದಾನ ಕ್ಷೇತ್ರದಲ್ಲಿ ನಡೆಯುತ್ತಿದೆ. ಧರ್ಮ ಕ್ಷೇತ್ರಗಳ ಸ್ವಚ್ಛತೆ , ಶುಚಿತ್ವ ಕಾಪಾಡುವುದು ಎಲ್ಲಾ ಧರ್ಮಗಳ ಪ್ರಮುಖವಾಗಿದ್ದು,ಈ ಬಗ್ಗೆ ಚಿಂತನೆ ಅಗತ್ಯ ಎಂದರು.

    ಬಸದಿಗಳ ಜೀರ್ಣೋದ್ಧಾರದಿಂದ ಸಮಾಜದಲ್ಲಿ ಐಕ್ಯತೆ ಬರುತ್ತದೆ , ಬಸದಿ ಸಮುದಾಯಗಳ ಜೀರ್ಣೋದ್ಧಾರದಿಂದ ಉತ್ತಮ ಪರಿಸರ ಬೆಳೆಯುತ್ತದೆ ಎಂದ ಅವರು, ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.  ಭೂ– ಮಸೂದೆ ತಂದ ನಂತರ ಬಸದಿಗಳ ನಿರ್ವಹಣೆ ಕಷ್ಟವಾಗಿತ್ತು ಎಂದು ಅವರು, ವಿದ್ಯಾವಂತರಾಗಿ, ವಿಚಾರವಂತರಾಗಿ, ಆಚಾರವಂತರಾದಾಗ ಬೆಲೆ ಬರಲಿದೆ ಎಂದರು.

    ಇದೇ ಸಂದರ್ಭದಲ್ಲಿ  ಅರಳ ರಾಜೇಂದ್ರ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಮಲ್ ಕುಮಾರ್ ಬೆಟೆಗೇರಿ, ಅರಮನೆ ಎಲ್.ಎಂ. ವೀರೇಂದ್ರ, ಮೂಡುಬಿದ್ರೆ ಅರಮನೆಯ ಕುಲದೀಪ್ .ಎಂ. ಚೌಟ, ನಿಖಿಲ್, ಮಿಥುನ್ ಚೋಟ, ಸಿ.ಎಂ.ಸುರೇಶ್ ಕುಮಾರ್ , ಮೊಕೇಶ್ವರ ಆದರ್ಶ ಸೇರಿದಂತೆ ಅರಮನೆ ,ಕೊಂಡೆ ಮನೆ ,ಚೌಟ ಅರಮನೆ ಸದಸ್ಯರುಗಳು ,ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಕು .ಖ್ಯಾತಿ ಪ್ರಾರ್ಥಿಸಿದರು.  ಪ್ರಭಾತ್ ಬಲ್ಲಾಳ್ ಸ್ವಾಗತಿಸಿ –ಕಾರ್ಯಕ್ರಮ ನಿರೂಪಿಸಿದರು.  ಸಿ.ಎಂ. ಆದರ್ಶ  ವಂದಿಸಿದರು.

    ವರದಿ: ಜೆ.ರಂಗನಾಥ. ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಅಧಿಕಾರಿಗಳ ನಿರ್ಲಕ್ಷ್ಯ, ಸಂಸದರ ಆಶ್ವಾಸನೆಯೂ ನೀರ ಮೇಲಿನ ಗುಳ್ಳೆ: ಜನಸ್ಪಂದನದಲ್ಲೂ ಸಿಗದ ನ್ಯಾಯ!

    September 2, 2026

    ಅಭಿವೃದ್ಧಿ ಮರೀಚಿಕೆಯಾದ ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ: ಭಕ್ತರ ಆಕ್ರೋಶ

    September 2, 2026

    ಸುಂಧಾಳದಲ್ಲಿ ಜಾಬ್ ಕಾರ್ಡ್ ಮೇಳ: ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜನಜಾಗೃತಿ

    September 2, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯ, ಸಂಸದರ ಆಶ್ವಾಸನೆಯೂ ನೀರ ಮೇಲಿನ ಗುಳ್ಳೆ: ಜನಸ್ಪಂದನದಲ್ಲೂ ಸಿಗದ ನ್ಯಾಯ!

    September 2, 2026

    ಹೊಳೆನರಸೀಪುರ / ಹಳ್ಳಿಮೈಸೂರು:  ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್…

    ಅಭಿವೃದ್ಧಿ ಮರೀಚಿಕೆಯಾದ ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ: ಭಕ್ತರ ಆಕ್ರೋಶ

    September 2, 2026

    ಸುಂಧಾಳದಲ್ಲಿ ಜಾಬ್ ಕಾರ್ಡ್ ಮೇಳ: ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜನಜಾಗೃತಿ

    September 2, 2026

    ಸರಗೂರು ವೀರಶೈವ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಸಿ. ಮಹೇಶ್, ಉಪಾಧ್ಯಕ್ಷರಾಗಿ ಎಂ. ಶಿವಣ್ಣ ಅವಿರೋಧ ಆಯ್ಕೆ

    September 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.