ತುರುವೇಕೆರೆ: ಪಟ್ಟಣದ ಪಿ ಕಾರ್ಡ್ ಬ್ಯಾಂಕ್ ಆವರಣದಲ್ಲಿ ಮೈಸೂರು ರಾಜ್ಯದ ಗೌರವಾನ್ವಿತ ಮಹಾರಾಜರು ಕ್ರೀಡೆ ಹಾಗೂ ಸಂಗೀತ ಪ್ರೇಮಿ ಜಯ ಚಾಮರಾಜೇಂದ್ರ ಒಡೆಯರ್ ರವರ ಜನ್ಮದಿನವನ್ನು ಆಚರಿಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ರವರ ಭಾವಚಿತ್ರವನ್ನು ಸಭಾಂಗಣದಲ್ಲಿ ಇರಿಸಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು ಹಾಗೂ ತಾಲೂಕಿನ ಪತ್ರಕರ್ತರಾದ ಶ್ರೀಕಾಂತ ರಾಜ್ ಅರಸ್ ಅವರು, ಜನ್ಮದಿನ ಆಚರಣೆ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಸಿಹಿ ವಿತರಿಸಿದರು.
ಇದೇ ವೇಳೆ ಅಮಾನಿ ಕೆರೆ ಮಂಜಣ್ಣರವರು ಒಡೆಯರ್ ಅವರ ಗುಣಗಾನ ಹಾಗೂ ಅವರ ಸಾಧನೆ, ಕೈಗೊಂಡ ಕಾರ್ಯಗಳನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಪಿ ಕಾರ್ಡ್ ಬ್ಯಾಂಕ್ ನ ಅಧ್ಯಕ್ಷ ಮೂಡ್ಲಗಿರಿಯಪ್ಪ, ತಾವರೆಕೆರೆ ರಾಮೇಗೌಡರು, ಉಗ್ರೇಗೌಡರು, ಕೋಳಾಲ ನಾಗರಾಜ್, ಗೊಟ್ಟಿಕೆರೆ ಕಾಂತರಾಜು, ಕರುನಾಡ ವಿಜಯ ಸೇನೆಯ ತಾಲೂಕು ಅಧ್ಯಕ್ಷ ಎಚ್.ಎಸ್ .ಸುರೇಶ್, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಆಬುಲಕಟ್ಟೆ ರಾಮಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz