nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026
    Facebook Twitter Instagram
    ಟ್ರೆಂಡಿಂಗ್
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    • ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
    • ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?
    • ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಲುವರಾಜು
    ಜಿಲ್ಲಾ ಸುದ್ದಿ April 17, 2022

    ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಲುವರಾಜು

    By adminApril 17, 2022No Comments2 Mins Read
    jilladhikari nade halli kade

    ಸರಗೂರು: ತಾಲ್ಲೂಕಿನ ಕಂದಲಿಕೆ ಹೋಬಳಿಯ ಬೆದ್ದಲಪುರ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಚಲುವರಾಜು,  ಸಭೆಯಲ್ಲಿ ತಿಳಿಸಲಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲಾಗುವುದು ಉಳಿದಂತೆ ದುರಸ್ಥಿ, ಒತ್ತುವರಿ ತೆರವು, ಓಣಿ ಬಿಡುಸುವ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಸೂಚಿಸಿ ಅವರ ಸಹಕಾರದಿಂದ ಆದಷ್ಟು ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.


    Provided by
    Provided by

    ಸರಗೂರು ವ್ಯಾಪ್ತಿಯ 3 ಭಾಗಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಡೆಸಿ ಆ ಭಾಗಗಳ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತಿದೆ.  ಇದು ನಾಲ್ಕನೇ ಕಾರ್ಯಕ್ರಮ ಇಲ್ಲಿಯೂ ಸಹ ಜನರ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು, ಉಳಿದ ಸಮಸ್ಯೆಗಳನ್ನು ನಿಗದಿತ ಕಾಲಕ್ಕನುಸಾರವಾಗಿ ಬಗೆಹರಿಸಲಾಗುವುದು ಎಂದರು.

    ಇದೇ ವೇಳೆ ಗ್ರಾಮದ ಕರೀಗೌಡ, ಸೋಮಣ್ಣ ಸೇರಿದಂತೆ ಹಲವು ಗ್ರಾಮಸ್ಥರು ಗ್ರಾಮದಲ್ಲಿ ಕಾಡಾನೆಗಳ ಆವಳಿ ಹೆಚ್ಚಾಗಿದೆ, ರಸ್ತೆಗಳ ಸರಿಯಾಗಿಲ್ಲ ಜೊತೆಗೆ ನೂರಾರು ಎಕರೆಯಷ್ಟು ಜಮೀನುಗಳು ಸಾಗುವಳಿ, ದುರಸ್ಥಿಯಾಗಬೇಕು, ಅಲ್ಲದೇ ರೈತರು ಸಾಕಷ್ಟು ರಾಗಿಯನ್ನು ಬೆಳೆದಿದ್ದು, ಅದನ್ನು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಬೇಕು.  ನೈಸರ್ಗಿಕ ವಿಕೋಪ, ಕಾಡಾನೆಗಳ ದಾಳಿಯಿಂದಾಗಿ ಈಗಾಗಲೇ ನಮ್ಮ ರೈತರು ಸಾಕಷ್ಟು ಬೆಳೆ ನಷ್ಟವನ್ನು ಹೊಂದಿದ್ದಾರೆ.  ಆದರೆ ಅವರಿಗೆ ಈವರೆಗೂ ಸರಿಯಾದ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದರು.

    ರೈತರು ತಮ್ಮ ಕೆಲಸಗಳಿಗೆ ನಾಡಕಛೇರಿ, ನೆಮ್ಮದಿ ಕೇಂದ್ರ ಸೇರಿದಂತೆ ಯಾವುದೇ ಸರ್ಕಾರಿ ಕಛೇರಿಗೆ ಹೋದರೆ ಸರ್ಕಾರಿ ಶುಲ್ಕಕ್ಕಿಂತ ಅಧಿಕ ಹಣ ಪಡೆಯುತ್ತಿದ್ದಾರೆ. ಹಣ ಇಲ್ಲ ಎಂದರೆ ಯಾವುದೇ ಕೆಲಸ ಆಗದಂತಾಗಿದೆ ಎಂಬ ಹಲವು ದೂರುಗಳನ್ನು ನೀಡಿದರು.

    ದೂರುಗಳನ್ನು ಆಲಿಸಿ ಬಳಿಕ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಬೆಳೆ ಹಾನಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗರ ಬಳಿ ಮಾಹಿತಿ ನೀಡಿರುವವರ ಪಟ್ಟಿಯನ್ನು ನೀಡಿದರೆ,  ಅದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ ದುರಸ್ಥಿಗೆ ಸಂಬಂಧಿಸಿದಂತೆ ಭೂಮಾಪನ ಇಲಾಖೆಯ ಸಹಯೋಗದೊಂದಿಗೆ ಅದರ ಬಗ್ಗೆ ಕ್ರಮವಹಿಸುವ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ಅರ್ಜಿಗಳ ಮೂಲಕ ನೀಡಲಾಗಿರುವ ಸಮಸ್ಯೆಗಳ ಬಗ್ಗೆ ಕೂಡಲೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಹರಿಯಾಲಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಮತ್ತು ರಸ್ತೆ ಸಂಪರ್ಕವನ್ನು ನೀಡಲು ಅರಣ್ಯ ಇಲಾಖೆ ಅನುಮತಿ ನೀಡುತಿಲ್ಲ ಎಂಬ ಸಮಸ್ಯೆಯನ್ನು ಮುಂದಿಟ್ಟರು. ಇದಕ್ಕೆ ತಹಸೀಲ್ದಾರ್ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ವದಗಿಸುವ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು.

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗೋಪಾಲಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ವಸಂತ್ ಕುಮಾರ್, ಭೂಮಾಪನ ಇಲಾಖೆಯ ಉಮೇಶ್, ಏತ ನೀರಾವರಿಯ ಉಷಾ, ಲೋಕೋಪಯೋಗಿ ಇಲಾಖೆಯ ರಾಜಯ್ಯ, ಪಶು ಸಂಗೋಪನೆ ಇಲಾಖೆಯ ವೈ.ಡಿ.ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಜಯರಾಜ್, ಉಪಾಧ್ಯಕ್ಷ ಮಂಜುಳ ಶಿವರಾಜು, ಸದಸ್ಯರಾದ ಶಿವಮ್ಮ ನಾಗಣ್ಣ, ಸತೀಶ್, ಮಾಜಿ ಸದಸ್ಯ ವಿನೋದ್ ಕುಮಾರ್, ಮುಖಂಡರಾದ ದೇವದಾಸ್, ಚಂದ್ರೇಗೌಡ, ಶೋಭಾ ಶಿವಲಿಂಗ, ನೂರೋಳಯ್ಯ, ಪಿಡಿಒ ಚೆನ್ನಪ್ಪ.ಮುಳ್ಳೂರು ಗ್ರಾಪಂ ಸದಸ್ಯ ಶಿವರಾಜ್. ಹಳೆಹೆಗ್ಗುಡಿಲುಗ್ರಾಮದ ಪರಶಿವಮೂರ್ತಿ.ಶಂಕರ್. ಮುಂತಾದವರು ಹಾಜರಿದ್ದರು.

    ವರದಿ:  ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಈ ವರ್ಷ 52 ಸಾವಿರ ಅತಿಥಿ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

    May 23, 2026

    ಬೀದರ್ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ: 7 ಮಂದಿ ಆರೋಪಿಗಳ ಬಂಧನ

    May 23, 2026

    ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ

    May 22, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಬೆಂಗಳೂರು ಉತ್ತರದ ಸರ್ಕಾರಿ…

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.