nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು

    September 23, 2026

    ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ

    September 23, 2026

    ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ

    September 23, 2026
    Facebook Twitter Instagram
    ಟ್ರೆಂಡಿಂಗ್
    • ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು
    • ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ
    • ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ
    • ರಾಜ್ಯದಲ್ಲಿ ಬರ ಘೋಷಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ: ಮೂರನೇ ಹಂತದಲ್ಲಿ 53 ಹೊಸ ತಾಲೂಕುಗಳು ಸೇರ್ಪಡೆ!
    • ಹೊಳೆನರಸೀಪುರ: ಕುಪ್ಪೆ ಗ್ರಾಮದಲ್ಲಿ ಕತ್ತಲೆಯಲ್ಲಿ ಮುಳುಗಿದ ಪ್ರಮುಖ ವೃತ್ತಗಳು; 35 ದಿನ ಕಳೆದರೂ ಕಣ್ಣುಮುಚ್ಚಿ ಕುಳಿತ ಪಿಡಿಒಗಳು!
    • ಹೊಳೆನರಸೀಪುರ: ತಾತನಹಳ್ಳಿ ಡೈರಿ ಅವ್ಯವಸ್ಥೆ – ಸಾವಿರಾರು ಲೀಟರ್ ಹಾಲು ಹಾಳು, ರೈತರಿಂದ ಆಕ್ರೋಶಭರಿತ ಪ್ರತಿಭಟನೆ
    • ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್
    • ತೋಟದಲ್ಲಿ ಗಾಂಜಾ ಬೆಳೆದ ಪೊಲೀಸಪ್ಪನ ಪುತ್ರ: 950 ಗ್ರಾಂ ಸೊಪ್ಪು ವಶಕ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ
    ಕೊರಟಗೆರೆ October 17, 2022

    ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

    By adminOctober 17, 2022No Comments2 Mins Read
    nahida

    ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೂ ಪಿಂಚಣಿ ಕಾಣದ ಒಂದೇ ಗ್ರಾಮದ 25 ಜನ ವೃದ್ಧರಿಗೆ   ಸ್ಥಳದಲ್ಲಿಯೇ ಪಿಂಚಣಿ ಮಂಜೂರಾತಿ ಪತ್ರವನ್ನು ತಹಶೀಲ್ದಾರ್ ನಹಿದಾ ಜಮ್ ಜಮ್ ನೀಡಿದರು.

    ಬಳಿಕ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಈ ಬಾರಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ  ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ  ನಮ್ಮ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ನಿಮ್ಮ ಈ ಗ್ರಾಮದಲ್ಲಿ ಇರುತ್ತಾರೆ. ಸ್ಥಳೀಯ ಸಾರ್ವಜನಿಕರ  ಕುಂದು ಕೊರತೆಗಳ ಸಮಸ್ಯೆಗಳನ್ನು ಬಗೆಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದರಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ಸುಮಾರು 47 ಅರ್ಜಿಗಳು ನಮ್ಮ ಬಳಿ ಸಾರ್ವಜನಿಕರು ಕೊಟ್ಟಿದ್ದಾರೆ. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಜತೆಗೆ ಇದೇ ಗ್ರಾಮದ 25 ವೃದ್ಧರಿಗೆ ಪಿಂಚಣಿ ಪ್ರಮಾಣ ಪತ್ರವನ್ನು ವಿತರಿಸಿದ್ದೇವೆ. ಹಾಗೆಯೇ ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ಸುಮಾರು ವರ್ಷಗಳಿಂದ  ಶೌಚಾಲಯ ಹಾಗೂ ಕಾಂಪೌಂಡ್  ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿತ್ತು ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಯಿತು  ಎಂದು ತಿಳಿಸಿದರು.

    ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಹರೀಶ್ ಬಾಬು ಮಾತನಾಡಿ, ಅನೇಕ ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಶೌಚಾಲಯಗಳು ಇಲ್ಲದಿರುವ ಕಾರಣ  ಬಯಲಿಗೆ ಹೋಗಿ ಬರುತ್ತಿರುವ ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ.  ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶೌಚಾಲಯ ಹಾಗೂ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

    ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೊಡ್ಡ ಸಿದ್ದಯ್ಯ ಮಾತನಾಡಿ, ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಇನ್ನುಳಿದ ತಾಲ್ಲೂಕಿನ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಹಾಗೂ ಕಾಂಪೌಂಡ್ ಸರಿಯಾಗಿ ಇಲ್ಲದಿದ್ದರೆ ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಅನುದಾನಗಳು ಅಥವಾ  ನರೇಗಾ ಯೋಜನೆ ಅಡಿಯಲ್ಲಿ ಶಾಲೆಗಳಿಗೆ ಶೌಚಾಲಯ ಹಾಗೂ ಕಾಂಪೌಂಡ್ ವ್ಯವಸ್ಥೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ನಿರ್ಮಿಸಿಕೊಡಬೇಕು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ತಹಶೀಲ್ದಾರ್ ನಹಿದಾ ಜಮ್ ಜಮ್ ಅವರ ಕೆಲಸವನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ತಾಲ್ಲೂಕಿನ  ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು  ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ: ಬರಗಾಲದ ಹಿನ್ನೆಲೆ ‘ಹೊಲ ಹೂಳುವ ಗಣಪತಿ’ ಪ್ರತಿಷ್ಠಾಪನೆ; ಅದ್ದೂರಿಯಾಗಿ ಜರುಗಿದ ಶ್ರೀ ವಿದ್ಯಾ ಗಣಪತಿ ವಿಸರ್ಜನೆ!

    September 20, 2026

    ತುಮಕೂರಿನಲ್ಲಿ ಅತ್ಯಾಧುನಿಕ ‘ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಲೋಕಾರ್ಪಣೆ; ಉದ್ಘಾಟಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    September 20, 2026

    ಕೊರಟಗೆರೆ: ಪ್ರಜಾಸೇವಾ ಸಭೆಯಲ್ಲಿ 203 ಅರ್ಜಿ ಸ್ವೀಕಾರ, 10 ಸ್ಥಳದಲ್ಲೇ ಇತ್ಯರ್ಥ! | ಸಮಸ್ಯೆ ನಿವಾರಣೆಗೆ ರೈತರ ಆಗ್ರಹ

    September 19, 2026

    Comments are closed.

    Our Picks

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು

    September 23, 2026

    ಔರಾದ್‌/ಬೀದರ್ : ಗ್ರಾಮೀಣ ಪ್ರದೇಶಗಳಲ್ಲಿ ವಿಬಿ–ಜಿ ರಾಮ್‌ ಜಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎನ್‌ ಎಂಎಂಎಸ್‌ (NMMS)…

    ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ

    September 23, 2026

    ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ

    September 23, 2026

    ರಾಜ್ಯದಲ್ಲಿ ಬರ ಘೋಷಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ: ಮೂರನೇ ಹಂತದಲ್ಲಿ 53 ಹೊಸ ತಾಲೂಕುಗಳು ಸೇರ್ಪಡೆ!

    September 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.