nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ

    November 5, 2026

    ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ

    November 5, 2026

    ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು

    November 5, 2026
    Facebook Twitter Instagram
    ಟ್ರೆಂಡಿಂಗ್
    • ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ
    • ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ
    • ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಪಾವಗಡ: ಒಂದು ಟನ್‌  ಕಬ್ಬಿಗೆ ₹5,500 ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ
    • ವಾರ್ತಾ ಇಲಾಖೆ ಆದೇಶದಿಂದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ :  ಆದೇಶ ಹಿಂಪಡೆಯುವಂತೆ ಸಂಪಾದಕರ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ
    • ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ
    • ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ
    • ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೆ.ಎನ್. ರಾಜಣ್ಣ ಮತ್ತು ಎಂ.ವಿ. ವೀರಭದ್ರಯ್ಯ ನನಗೆ ಸಮಾನ ಎದುರಾಳಿಗಳು: ಎಲ್.ಸಿ.ನಾಗರಾಜು
    ಮಧುಗಿರಿ April 20, 2023

    ಕೆ.ಎನ್. ರಾಜಣ್ಣ ಮತ್ತು ಎಂ.ವಿ. ವೀರಭದ್ರಯ್ಯ ನನಗೆ ಸಮಾನ ಎದುರಾಳಿಗಳು: ಎಲ್.ಸಿ.ನಾಗರಾಜು

    By adminApril 20, 2023No Comments2 Mins Read
    madugiri

    ಮಧುಗಿರಿ ಕ್ಷೇತ್ರದಲ್ಲಿ ಕೆ.ಎನ್. ರಾಜಣ್ಣ ಮತ್ತು ಎಂ.ವಿ. ವೀರಭದ್ರಯ್ಯ ಇಬ್ಬರೂ ನನಗೆ ಸಮಾನ ಎದುರಾಳಿಗಳು ಎಂದು ಬಿಜೆಪಿ ಅಭ್ಯರ್ಥಿ ಎಲ್.ಸಿ.ನಾಗರಾಜು ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇಲ್ಲಿ ನಮಗೆ ಪ್ರಬಲ ಎದುರಾಳಿ ಎಂಬ ಪ್ರಶ್ನೆ ಬರುವುದಿಲ್ಲ. ರಾಜಣ್ಣ, ವೀರಭದ್ರಯ್ಯ ಇಬ್ಬರೂ ನಮಗೆ ಸಮಾನ ಸ್ನೇಹಿತರು, ಸಮಾನ ಎದುರಾಳಿಗಳು ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸ್ಥಳೀಯರಾದ ನಮಗೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

    90ರ ದಶಕದ ನಂತರದಿಂದ ಇಲ್ಲಿಯವರೆಗೂ ಮಳೆ ಕೈಕೊಟ್ಟ ಸಂದರ್ಭದಲ್ಲಿ ಭೂಮಿಯಲ್ಲಿ ವ್ಯವಸಾಯ ಮಾಡಲು ಆಗದಿರುವ ಸಂದರ್ಭದಲ್ಲಿ ವಲಸೆ ಹೋಗುವ  ಪ್ರಕ್ರಿಯೆ  ಮಧುಗಿರಿಯಲ್ಲಿ ಪ್ರಾರಂಭವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಅಡಿಯ 19 ಟಿಎಂಸಿ ನೀರು ಲಭ್ಯವಿದ್ದು, ಇದನ್ನು ಬಳಸಿಕೊಂಡು ಬಯಲು ಸೀಮೆ ಭಾಗದ ಜನರಿಗಾಗಿ ಶಾಶ್ವತ ಶುದ್ಧ ನೀರು ಕೊಡುವ ಯೋಜನೆಯನ್ನು ಜಾರಿಗೊಳಿಸಲು ಒಂದು ದೊಡ್ಡ ಹೋರಾಟ ಮಾಡಬೇಕಾಗಿದೆ. ಈ ಹೋರಾಟಕ್ಕೆ ಕ್ಷೇತ್ರದ ಮತ ಬಾಂಧವರ ಸಹಕಾರ ನನಗೆ ಬೇಕಾಗಿದೆ. ಈ ಬಾರಿಯ 2023ರ ಸಾರ್ವತ್ರಿಕ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದು, ಕ್ಷೇತ್ರದ ಎಲ್ಲಾ ಮತಬಾಂಧವರು ಸ್ಥಳೀಯರಿಗೆ ಆದ್ಯತೆ ನೀಡಿ ಆಶೀರ್ವಾದಿಸಿ ಮನವಿ ಮಾಡಿದರು.

    ನಾನು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ನಾನು ಈ ಹಿಂದೆ ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದೆ, ಕ್ಷೇತ್ರ ಅಭಿವೃದ್ಧಿ ಕಾಣದಿರುವುದು ಗಮನದಲ್ಲಿಟ್ಟುಕೊಂಡು, ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಮಗನಾಗಿ ಸ್ಥಳೀಯರಿಗೆ ಅಧಿಕಾರ ದೊರೆಯಬೇಕು ಎಂಬ ಉದ್ದೇಶದಿಂದ ರಾಜೀನಾಮೆ ಕೊಟ್ಟು ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಬಂದಿದ್ದೇನೆ ಎಂದರು.

    ಇನ್ನೂ ನಾಮಪತ್ರ ಸಲ್ಲಿಕೆಗೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ 20 ರಿಂದ 25,000 ಕಮಲ ಪಡೆಯ ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಎಲ್. ಸಿ.ನಾಗರಾಜು ಬೃಹತ್ ರೋಡ್ ಶೋ ನಡೆಸಿದರು. ಪಟ್ಟಣದ ದಂಡಿನ ಮಾರಮ್ಮನ ದೇವಸ್ಥಾನದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಆರಂಭಗೊಂಡ ರೋಡ್ ಶೋ ತುಮಕೂರು ಗೇಟ್, ಪೆಟ್ರೋಲ್ ಬಂಕ್ ಸರ್ಕಲ್, ಡೂಂಲೈಟ್ ಸರ್ಕಲ್ ವೃತ್ತ, ದಂಡೂರು ಬಾಗಿಲ ರಸ್ತೆ ಮೂಲಕ ಸಾಗಿ ಪಾವಗಡ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಹರಿಯಾಣ  ಮೇಯರ್ ಗೌತಮ್ ಸದರನ್, ಬಿ ಜೆ ಪಿ ಚುನಾವಣಾ ಉಸ್ತುವಾರಿ ಹೆಚ್.ಎಂ.ರವೀಶ್, ಟಿ.ಜಿ.ಗೋವಿಂದರಾಜು, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಇತಿಹಾಸ್ ಪಾಶ, ಬಿಜೆಪಿ ಉಪಾಧ್ಯಕ್ಷ ಬಿ.ಎನ್. ಲಕ್ಷ್ಮೀಪತಿ, ಮಂಡಲ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಂದ್ರ, ಪ್ರಕಾಶ್, ಜಿಲ್ಲಾ ಕಾರ್ಯಾಲಯ ಸುರೇಶ್, ಟಿ.ಗೋವಿಂದರಾಜು, ಸೀತಾರಾಮ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿ, ಬಡವನಹಳ್ಳಿ ನಾಗರಾಜಪ್ಪ, ಯುವ ಮೋರ್ಚ ಕಾರ್ತಿಕ್ ಆರಾಧ್ಯ, ಚಿಕ್ಕ ಓಬಳರೆಡ್ಡಿ, ಅಲ್ಪಸಂಖ್ಯಾತರ ಮಂಡಲ ಅಧ್ಯಕ್ಷ ರಿಯಾಜ್, ಮಹಿಳಾ ಮೋರ್ಚ ರತ್ನಮ್ಮ, ಪುಷ್ಪಲತಾ, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಮಧುಗಿರಿಯಲ್ಲಿ ಹೊಸ ಬಾರ್‌ ಗಳಿಗೆ ಸ್ಥಳ ಪರಿಶೀಲನೆ: ಸಂಘಟನೆಗಳಿಂದ ತೀವ್ರ ವಿರೋಧ!

    November 4, 2026

    ಮಧುಗಿರಿ ತಾಲೂಕಿನಲ್ಲಿ ಹೈನುಗಾರರಿಗೆ ₹63 ಲಕ್ಷದ ಸೌಲಭ್ಯ ಹಾಗೂ ಪರಿಹಾರ ವಿತರಣೆ

    October 31, 2026

    ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ದಂಪತಿ: ಶಾಸಕ ಕೆ.ಎನ್. ರಾಜಣ್ಣ ಸಂತಾಪ

    October 29, 2026

    Comments are closed.

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ

    November 5, 2026

    ತುಮಕೂರು ನಗರದ ಪ್ರತಿಷ್ಠಿತ ‘ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ’ದ ಮರುನಾಮಕರಣ ಅಥವಾ ಹೆಸರು ಬದಲಾವಣೆ ಕುರಿತು ಹಬ್ಬಿರುವ…

    ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ

    November 5, 2026

    ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು

    November 5, 2026

    ಪಾವಗಡ: ಒಂದು ಟನ್‌  ಕಬ್ಬಿಗೆ ₹5,500 ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ

    November 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.