ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದಲ್ಲಿ ಕಣಿವೆ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಶೇಷಪ್ಪನಹಳ್ಳಿ , ಸುಬ್ಬರಾಯರ ಸ್ವಾಮಿ, ಹಟ್ಟಿಲಕ್ಕಮ್ಮ ದೇವಿ , ಹುಳುವಿನಾಳ್ ಕರಿಯಮ್ಮ ದೇವಿ ದೇವರುಗಳ ಸಮ್ಮಖದಲ್ಲಿ ಅರಿಶಿನಗುಂಡಿಯ ಪ್ರಮುಖ ಬೀದಿಗಳಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಕಾಡುಗೊಲ್ಲ ಸಮುದಾಯದ ಮುಖಂಡರಾದ ಸಿ.ಬಿ. ಪಾಪಣ್ಣ, ಅರಿಶಿನಗುಂಡಿ ಪಬ್ಲಿಕ್ ಆ್ಯಪ್ ಶಿವಕುಮಾರ್, ರಮೇಶ್ ಕುಮಾರಪ್ಪ, ನಾಗರಾಜ್ ಕಣುಮಪ್ಪ, ರಮೇಶ್, ತ್ಯಾರಪ್ಪ,ರಾಜಪ್ಪ, ಮಂಜುನಾಥ, ರಂಗನಾಥ, ಕಣುಮೇಶ್, ಕಾಳಪ್ಪ, ಸಿದ್ದಪ್ಪ ಕೋಡಪ್ಪ, ಕೆಂಚ್ಚಪ್ಪ ಸೇರಿದಂತೆ ಅರಿಶಿನಗುಂಡಿ , ಹಾಲ್ ಮಾದೇನಹಳ್ಳಿ, ಯಲ್ಲದಕೆರೆ.ಕೆ.ಕೆ ಹಟ್ಟಿ, ಚಿಕ್ಕಬ್ಯಾಲದಕೆರೆ ಗೋಕುಲನಗರ ಶೇಷಪ್ಪನಹಳ್ಳಿ , ಕಾಟಿಹಟ್ಟಿ. ಅಮ್ಮನಹಟ್ಟಿ ಜೆ.ಎಸ್.ಪುರ. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಕಲ ಭಕ್ತರು ಸಹ ಅರಿಶಿನಗುಂಡಿ ಗ್ರಾಮದ ಕಣಿವೆ ಮಾರಮ್ಮ ದೇವಿ ಜಾತ್ರೆಗೆ ಆಗಮುಸಿ ದೇವಿಯ ದರ್ಶನ ಪಡೆದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5