ತುಮಕೂರು: ಜಿಲ್ಲೆಯ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕನ್ನಡ’ ಭಾಷೆ ಭಾಷೆಗಳ ರಾಣಿ ಇದ್ದ ಹಾಗೆ ನಮ್ಮ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಸಾಹಸ ಶೌರ್ಯ, ಔದಾರ್ಯಕ್ಕೆ ಹೆಸರಾಗಿದ್ದು, ನಾಡು ನುಡಿಯ ವಿಷಯದಲ್ಲಿ ನಾವೆಲ್ಲರೂ ಸ್ವಾಭಿಮಾನಿಗಳಾಗಿರಬೇಕು. ವಿಜಯನಗರ ಸಾಮ್ರಾಟ ಕೃಷ್ಣದೇವರಾಯರ ಆದಿಯಾಗಿ ಅನೇಕ ರಾಜಮಹರಾಜರು ಕವಿಗಳು ಶರಣರು ನಾಡಿನ ಕೀರ್ತಿಯನ್ನ ಬೆಳಗಿದ್ದು, ಇಂದು ಅಖಂಡ ಕರ್ನಾಟಕ ಕನ್ನಡಿಗ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಕನ್ನಡ ನಾಡು ನುಡಿ, ಅನೇಕ ಮಹನೀಯರ ತ್ಯಾಗ ಪರಿಶ್ರಮದಿಂದ ರೂಪುಗೊಂಡಿದೆ. ಕನ್ನಡಿಗರು ಹೃದಯ ವೈಶಾಲ್ಯಕ್ಕೆ ಹೆಸರಾಗಿದ್ದು ಡ್ಯಾಡಿ ಮಮ್ಮಿ ಸಂಸ್ಕೃತಿ ಬಿಟ್ಟು ಅಪ್ಪ ಅಮ್ಮ ಅನುವ ಸಂಸ್ಕೃತಿ ಬೆಳಸಿಕೊಳ್ಳ ಬೇಕು, ನಮ್ಮ ಭಾಷೆ ನಾಡು ನುಡಿಯನ್ನ ಪ್ರೀತಿಸೋಣ ಬೇರೆ ಭಾಷೆಗಳನ್ನ ಗೌರವಿಸೋಣ, ನಮ್ಮ ನಾಡು ನುಡಿಗೆ ಅಗೌರವ ಉಂಟಾದಾಗ ಸ್ವಾಭಿಮಾನಿಗಳಾಗಿ ಒಗ್ಗೂಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸನ್ಮಾನಿಸಲಾಯಿತು. ತಹಶೀಲ್ದಾರ್ ಪವನ್ ಕುಮಾರ್ ಇ.ಒ. ಸುದರ್ಶನ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ಮುಂತಾದವರು ಉಪಸ್ಥಿತರಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q