ಆಗಸ್ಟ್ 9ಕ್ಕೆ ಪ್ರತಿಯೊಬ್ಬ ಕನ್ನಡಿಗರ ಮನೆ ಮೇಲೆ ಕನ್ನಡದ ಹಳದಿ ಮತ್ತು ಕೆಂಪು ಬಣ್ಣದ ಬಾವುಟ ರಾರಾಜಿಸಲಿ ಎಂದು ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ಸ್ವಾಭಿಮಾನಿ ಕನ್ನಡಿಗರಿಗೆ ಕರೆ ನೀಡಿದ್ದಾರೆ.
ಹೇಳಿಕೆ ಹೀಗಿದೆ:
ಕರ್ನಾಟಕ ರಾಜ್ಯವೂ ಈ ಹಿಂದೆ ಮೈಸೂರು ಸಂಸ್ಥಾನ ಎಂಬ ಹೆಸರಿನ ಸ್ವತಂತ್ರ ದೇಶ, ಸಾಮ್ರಾಜ್ಯವಾಗಿತ್ತು. ಆದರೆ ಈ ಒಕ್ಕೂಟ ಭಾರತದ ಸ್ವಾತಂತ್ರ್ಯ ಸಲುವಾಗಿ ನಮ್ಮ ದೇಶವನ್ನು ರಾಜ್ಯವನ್ನಾಗಿ ಕೆಳದರ್ಜೆ ಇಳಿಸಲಾಯಿತು ಎಂದರೆ ತಪ್ಪಾಗಲಾರದು, 09 ಆಗಸ್ಟ್ 1947 ರಲ್ಲಿ ಒಕ್ಕೂಟ ಭಾರತದ ರಾಯಭಾರಿಯಾದ ನರಸಿಂಹ ರಾವ್ ರವರ ಮಾತುಕತೆಯಿಂದ ಅಂದಿನ ಮೈಸೂರು ದೇಶದ/ಸಾಮ್ರಾಜ್ಯದ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಸಾಮ್ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸಂಯೋಜಿಸಿ ಒಪ್ಪಂದಕ್ಕೆ ಸಹಿ ಹಾಕಿದರು. ಆ ಮಹಾರಾಜರು ಅಂದು ಮಾಡಿದ ತಪ್ಪಿನಿಂದ ಇಂದಿಗೂ ಕನ್ನಡಿಗರು ನೋವು, ಮೋಸ ವಂಚನೆ, ದ್ರೋಹಗಳನ್ನು ಅನುಭವಿಸುತ್ತಾ ಬರುತ್ತಿದ್ದೇವೆ ಎಂದರೆ ತಪ್ಪಾಗಲಾರದು.
ಒಕ್ಕೂಟಕ್ಕೆ ಸೇರಲು ಅಂದು ಒಡೆಯರ್ ರವರು ಸಹಿ ಹಾಕಿದ್ದು 3 ವಿಚಾರಗಳಿಗೆ:
1). ವಿದೇಶಾಂಗ ವ್ಯವಹಾರ
2). ಮಿಲಿಟರಿ ಭದ್ರತೆ
3).ಹಣಕಾಸು
ಸುಭದ್ರತೆಗೆ ನೋಟ್ ಮುದ್ರಣಾ RBI ನಾ ವ್ಯವಹಾರ ಆದರೆ ಇಂದು ಈ ಒಕ್ಕೂಟ ಭಾರತದ ಭ್ರಷ್ಟ ಸರ್ಕಾರ ನಮ್ಮ ಪಾಲಿನ ಜಿ.ಎಸ್.ಟಿ ಸೇರಿದಂತೆ ಅನೇಕ ರೀತಿಯಲ್ಲಿ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ನಾಲಾಯಕ್ ಸರ್ಕಾರಗಳಾಗಿವೆ, ರಾಜ್ಯಗಳ ಸ್ವಯತ್ತತೆಯನ್ನು ಕಿತ್ತುಕೊಂಡು ಜನಸಾಮಾನ್ಯರನ್ನು ದಿನನಿತ್ಯ ಒಂದಲ್ಲ ಒಂದು ರೀತಿಯ ನರಕಯಾತನೆಗೆ ಗುರಿಮಾಡುತ್ತಿದೆ ಎಂದು ಅವರು ಹೇಳಿದರು.
ಉತ್ತರ ಭಾರತದಿಂದ ಅನ್ನಕ್ಕಾಗಿ, ದುಡಿಮೆಗೆಗಾಗಿ,ಬದುಕು ಕಟ್ಟಿಕೊಳ್ಳಲು ನಮ್ಮ ದಕ್ಷಿಣ ಭಾರತಕ್ಕೆ ವಲಸೆ ಬರುವ ವಲಸಿಗರಿಗೆ ಅನುಕೂಲ ಮಾಡಿಕೊಡಲು ಒನ್ ನೆಷನ್ ಹೆಸರಿನಲ್ಲಿ ಆಹಾರ, ಭಾಷೆ, ಕೆಲಸ, ವಿದ್ಯಾಭ್ಯಾಸ ದ ಅಭದ್ರತೆಯನ್ನು ಸೃಷ್ಟಿ ಮಾಡಿವೆ ಈ ಉತ್ತರ ಭಾರತದ ಅಟಕಸವಿ ಹಂದಿ ಹಿಂಡಿನ ಕುತಂತ್ರಿಗಳು, ಹಿಂದಿಯನ್ನು ಎಲ್ಲಿಯವರೆಗೆ ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳಿಕೊಂಡು ಬಂದಂತಹ ಈ ನೀಚ ಸರ್ಕಾರಗಳು, ನಮ್ಮ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡಿದ ಭ್ರಷ್ಟ ಮನೆಹಾಳು ಸರ್ಕಾರಗಳು, ಧರ್ಮ ಜಾತಿಯ ಹೆಸರಿನಲ್ಲಿ ಕೋಮುವಾದಿಕಾರಣ ಮಾಡುತ್ತಿರುವ ಈ ನಾಲಾಯಕ್ ಸರ್ಕಾರಗಳು ಇಲ್ಲಿಗೆ ಎಲ್ಲಾ ಅವರ ಕುತಂತ್ರದ ರಾಜಕಾರಣವನ್ನು ಬದಿಗೊತ್ತಿ ಸಂವಿಧಾನದ ರೀತಿ ರಿವಾಜುಗಳನ್ನು ಅನುಸರಿಸಿದರೆ ಸರಿ ಇಲ್ಲವಾದಲ್ಲಿ ಪ್ರತ್ಯೇಕ ಸ್ವಾತಂತ್ರ್ಯ ದೇಶದ ಕೂಗು ಪ್ರಾರಂಭಿಸಬೇಕಾಗಿತ್ತಾದೆ ಎಂದು ಈ ಒಕ್ಕೂಟ ಭಾರತ ಸರ್ಕಾರಕ್ಕೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ರವಾನಿಸಿದರು.
ಕನ್ನಡ ನಾಡಿನ ಎಲ್ಲಾ ಕನ್ನಡಿಗರು ಇದೆ ತಿಂಗಳು ಅಂದರೆ 9 ಆಗಸ್ಟ್ ರಂದು ತಮ್ಮ ತಮ್ಮ ಮನೆ, ಕಚೇರಿ, ಅಂಗಡಿ, ಇನ್ನಿತರ ಸ್ಥಳಗಳಲ್ಲಿ ಕನ್ನಡ ನಾಡಿನ ಭಾವುಟವಾದ ಹಳದಿ ಕೆಂಪು ಬಣ್ಣದ ಕನ್ನಡ ಭಾವುಟವನ್ನು ಹಾರಿಸಬೇಕು ಎಂದು ಕನ್ನಡ ನಾಡಿನ ಜನತೆಗೆ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್.ಕರೆ ನೀಡಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz