nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!

    July 9, 2026

    ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

    July 9, 2026

    ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ

    July 9, 2026
    Facebook Twitter Instagram
    ಟ್ರೆಂಡಿಂಗ್
    • ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
    • ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
    • ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
    • ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
    • ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
    • 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
    • ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
    • ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
    ಕೊರಟಗೆರೆ May 21, 2026

    ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ

    By adminMay 21, 2026No Comments2 Mins Read
    koratagere

    ಕೊರಟಗೆರೆ : ದೇಶದ ಶೇ.60 ಭಾಗ ಉದ್ಯೋಗ ಸೃಷ್ಠಿ ಮಾಡಿ 140 ಕೋಟಿ ಜನಸಂಖ್ಯೆಗೆ ಅನ್ನ ನೀಡುವ ಕೃಷಿ ಕ್ಷೇತ್ರ. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾ.ಘಟಕದಿಂದ ಆಯೋಜಿಸಿಲಾದ ಕೊರಟಗೆರೆ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಪದಾಧಿಕಾರಿಗಳ ಘೋಷಿಸಿ ಸಭೆ ಉದ್ದೇಶಿಸಿ ಮಾತನಾಡಿದರು.

    ಸರ್ಕಾರದ ಅವೈಜ್ಞಾನಿಕ ನೀತಿಗೆ ವಿರುದ್ಧವಾಗಿ ರೈತರ ಬದುಕು, ಜಮೀನು ರಕ್ಷಣೆಯೇ ಕರ್ನಾಟಕ ರಾಜ್ಯ ರೈತ ಸಂಘಟನೆ ಉದ್ದೇಶ. ತಾಲೂಕಿನಲ್ಲಿ ಸುಮಾರು ೪೦ ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ಹೋರಾಟಗಳ ಮೂಲಕ ಎಚ್ಚರಿಕೆ ನೀಡಿದ್ದೇವೆ, ಕೊರಟಗೆರೆ ಘಟಕಕ್ಕೆ ಯುವಕರೇ ಹೆಚ್ಚಾಗಿ ಆಯ್ಕೆಯಾಗಿ ಸಂಘಟನೆ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ಸ್ವಾತಂತ್ರ್ಯದ ನಂತರದಲ್ಲಿ ಕಳೆದ ೭೯ ವರ್ಷಗಳಲ್ಲಿ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಪರಿಗಣಿಸಿ ಕೃಷಿಕರ ಪರವಾದ ನೀತಿಗಳನ್ನು ಜಾರಿಗೊಳಿಸುವಂತೆ ತಿಳಿಸಿದರು.

    ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ದೊಡ್ಡಮಲ್ಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಒಂದು ವರ್ಷಗಳ ಕಾಲ ನೂತನವಾಗಿ ನಗರ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ರೈತ ಸಂಘ ಪ್ರಾರಂಭವಾಗಿ ೪೬ ವರ್ಷಗಳು ಕಳದಿದ್ದು, ರೈತ ಪರ ಹೋರಾಟ ಸೈದ್ಧಾಂತಿಕವಾಗಿ ಮುಂದುವರೆಯುತ್ತಿದೆ. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಆರೋಪಿಸಿದರು.

    ತಾ.ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, ರೈತ ಸಂಘದ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕೊರಟಗೆರೆ ನಗರ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳು ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ರೈತ ಸಂಘ ಕಟ್ಟುವಂತಹ ಕೆಲಸ ಮಾಡಬೇಕಿದೆ ಎಂದು ಹೇಳಿದರು.

    ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಬಾಷಾ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಸೋಮಶೇಖರಯ್ಯ, ದೇವರಾಜ್, ಲಕ್ಕಣ್ಣ, ನರಸಿಂಹಮೂರ್ತಿ, ಮುದ್ದಬಸವಯ್ಯ, ಕೃಷ್ಣಪ್ಪ, ಶ್ರೀನಿವಾಸ್, ಮೂಡ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.

    ನೂತನ ಪದಾಧಿಕಾರಿಗಳ ಆಯ್ಕೆ:

    ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನೂತನವಾಗಿ ಕೊರಟಗೆರೆ ನಗರ ಘಟಕವನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಗೌರವಾಧ್ಯಕ್ಷರಾಗಿ ಬಿ.ಜಿ ನರಸಿಂಹಯ್ಯ, ಅಧ್ಯಕ್ಷ ಮಾರುತಿ ಕೆ.ಆರ್, ಉಪಾಧ್ಯಕ್ಷ ಲಕ್ಷ್ಮೀಪತಿ ಪತಿ, ಲಕ್ಷ್ಮಣ ಕೆ.ವಿ, ಖಚಾಂಚಿ ಶ್ರೀನಿವಾಸ್ ಕೆ.ಆರ್, ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಕೆ.ಜೆ, ರಾಕೇಶ್ ಕೆ.ಆರ್, ಸಹ ಕಾರ್ಯದರ್ಶಿ ದಿನೇಶ್, ಕೆ.ಎಸ್ ಪುನೀತ್‌ ಕುಮಾರ್, ರಂಗನಾಥ್ ಕೆ.ಪಿ, ಸಂಘಟನಾ ಸಂಚಾಲಕ ರಂಗಯ್ಯ ಕೆ.ಎಚ್, ಮೈಲಾರಯ್ಯ ಕೆ.ಎಲ್, ಮಂಜುನಾಥ್, ಚೇತನ್, ಕೆ.ರಮೇಶ್, ಗೋಪಾಲ, ಮಹಿಳಾ ಮತ್ತು ತಾತ್ಕಲಿಕ ನಗರ ಘಟಕ ಸಂಚಾಲಕಿಯಾಗಿ ಅನಿತಲಕ್ಷ್ಮಿ, ಶಿವಮ್ಮ, ತಿಮ್ಮಕ್ಕ, ಗಂಗಮ್ಮ, ಸರಸ್ವತಮ್ಮ, ರಾಧಮ್ಮ ಆಯ್ಕೆಯಾಗಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ

    July 9, 2026

    ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ

    July 8, 2026

    ಗರ್ಭಕಂಠದ ಕ್ಯಾನ್ಸರ್ ತಡೆಯಬಹುದಾದ ಏಕೈಕ ಕ್ಯಾನ್ಸರ್: ಎಚ್‌ ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ  ಡಾ.ಜ್ಯೋತ್ಸ್ನಾ ರೆಡ್ಡಿ

    July 7, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!

    July 9, 2026

    ಕೆಲವೊಮ್ಮೆ ತೀವ್ರವಾದ ಮಸಾಜ್ ಮಾಡಿಸಿಕೊಳ್ಳುವಾಗ, ಮೈತುಂಬಾ ಹಚ್ಚೆ (Tattoos) ಹಾಕಿಸಿಕೊಳ್ಳುವಾಗ ಅಥವಾ ಕಠಿಣವಾದ ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಉಂಟಾಗುವ ನೋವಿನಲ್ಲಿ ಕೆಲವರು…

    ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

    July 9, 2026

    ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ

    July 9, 2026

    ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ

    July 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.