ಪಾವಗಡ: ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರು ಮಹಿಳೆಯರಿಗೋಸ್ಕರ ವಿಶೇಷ ಕೌಶಲ್ಯ ತರಬೇತಿಗಳನ್ನ ಯೋಜನೆಯಿಂದ ಅನುಷ್ಠಾನ ಮಾಡಿಸುತ್ತಿರುವುದು ಹೆಮ್ಮೆಯ ವಿಷಯ. ನೀವುಗಳು ಶ್ರದ್ದೆಯಿಂದ ತರಬೇತಿ ಪಡೆದುಕೊಂಡು ಸ್ವಂತ ಬದುಕನ್ನ ಕಟ್ಟಿಕೊಳ್ಳಿ ಎಂದು ಸದಸ್ಯರಿಗೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.
ತಾಲ್ಲೂಕಿನ ನಿಡಗಲ್ ವಲಯದ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾವಗಡ ತಾಲೂಕಿನ ಯೋಜನಾಧಿಕಾರಿಗಳಾದ ಮಹೇಶ್ ಹೆಚ್. ರವರು ಪೂಜ್ಯ ಖಾವಂದರ ಮಾಗ೯ದಶ೯ನದಂತೆ ತಾಲೂಕು ವ್ಯಾಪ್ತಿಯಲ್ಲಿ ಇದುವರೆವಿಗೂ ಒಟ್ಟು 25 ಜ್ಞಾನ ವಿಕಾಸ ಕೇಂದ್ರ ರಚನೆ ಮಾಡಿ ಒಟ್ಟು 1,500 ಸದಸ್ಯರು ಸೇರ್ಪಡೆ ಆಗಿ, ಇದುವರೆಗೂ ಒಟ್ಟು 2,000 ತರಬೇತಿ ಆಯೋಜನೆ ಮಾಡಿದ್ದು, ಜ್ಞಾನ ವಿಕಾಸ ಹಾಗೂ ಸ್ವಸಹಾಯ ಸಂಘ ಸದಸ್ಯರಿಗೆ ಒಟ್ಟು 6,500 ಜನ ತರಬೇತಿ ಮೂಲಕ ವಿವಿಧ ಮಹಿಳೆಯರಿಗೆ ಸಾಮರ್ಥ್ಯ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಟೈಲರಿಂಗ್, ಎಂಬ್ರಾಯಿಡಿಂಗ್, ಬ್ಯೂಟಿಪಾರ್ಲರ್, ಸಿರಿಧಾನ್ಯ, ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಶಿಬಿರ, ಬೀದಿ ನಾಟಕ ಮೂಲಕ ಅರಿವು ಮೂಡಿಸುವ, ಶಾಲಾ ಮಕ್ಕಳಿಗೆ ಟ್ಯೂಷನ್ ಕ್ಲಾಸ್, ಕೇಂದ್ರ ವಾರ್ಷಿಕೋತ್ಸವ, ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಮತ್ತು ಇತರೆ ಕೃಷಿ ಪೂರಕ ಕೃಷಿಯೇತರ ಸ್ವ ಉದ್ಯೋಗಗಳ ಬಗ್ಗೆ ತರಬೇತಿ ಹಾಗೂ ಅಧ್ಯಯನ ಪ್ರವಾಸಗಳನ್ನ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಂಗೇಗೌಡ ಶ್ರೀ ರಾಮ ಗ್ರಾಮಾಂತರ ಪ್ರೌಢಶಾಲೆಯ ಅಧ್ಯಕ್ಷರು ಕೆ. ಟಿ.ಹಳ್ಳಿ, ಹಾಲು ಒಕ್ಕೂಟದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಗ್ರಾಮಪಂಚಾಯ್ತಿ ಪಿ ಡಿ ಓ ಮಂಜುನಾಥ, ವಲಯ ಮೇಲ್ವಿಚಾರಕರಾದ ದಯಾನಂದ್, ಜ್ಞಾನವಿಕಾಸ ಮೇಲ್ವಿಚಾರಕಿ ವಿದ್ಯಾ, ಸೇವಾಪ್ರತಿನಿಧಿಗಳಾದ ಚಂದ್ರಕಲಾ, ನಾಗರತ್ನ, ನಾಗವೇಣಿ, ಒಕ್ಕೂಟದ ಪದಾಧಿಕಾರಿಗಳು ಜ್ಞಾನವಿಕಾಸ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q