ಕೋಡಿಗೇನಹಳ್ಳಿ: ಅಖಿಲ ಭಾರತ ರಾಷ್ಟ್ರೀಯ ಔಷಧ ವ್ಯಾಪಾರಿಗಳ ಮುಷ್ಕರ ಪ್ರಯುಕ್ತ ನಾವು ಗ್ರಾಮದಲ್ಲಿ ವ್ಯಾಪಾರವಹಿವಾಟು ಬಂದ್ ಮಾಡಿದ್ದು ಎನ್ ಐಸಿಡಿಗೆ ಬೆಂಬಲವಾಗಿದ್ದೇವೆ ಎಂದು ರಾಧಕೃಷ್ಣರೆಡ್ಡಿ ತಿಳಿಸಿದರು
ಕೋಡಿಗೇನಹಳ್ಳಿ ಗ್ರಾಮದಲ್ಲಿ ಎನ್ ಐಸಿಡಿ ಬಂದ್ ಬೆಂಬಲಿಸಿ ಮಾತನಾಡಿದ ಇವರು ಆನ್‌ಲೈನ್ ಮೂಲಕ ಔಷಧ ವ್ಯಾಪಾರ ನಿಲ್ಲಿಸಬೇಕು ಇದರಿಂದ ಎನ್.ಡಿ.ಪಿ.ಎಸ್. ಅಮಲು ಬರುವ ಔಷಧಗಳು ಸಾರ್ವಜನಿಕರಿಗೆ ಸಿಗದಂತೆ ಮಾಡಬಹುದು.
ಈ ಸಂಬಂಧ ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಬೇಕು, ಜಿ.ಎಸ್.ಆರ್.817 ದಿ:20–08–2018 ಮತ್ತು ಜಿ.ಎಸ್.ಆರ್220. ದಿ:26—03–2020 ಹಾಗೆ ಕಾರ್ಪೋರೇಟ್ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್ ವ್ಯಾಪಾರ ನಿಲ್ಲಿಸಿ ದೇಶದಲ್ಲಿ ಆರೋಗ್ಯಕರ ವ್ಯಾಪಾರದ ವಾತಾವರಣ ಸೃಷ್ಟಿಸಿ ಸ್ಪೂರಿಯಸ್ ಮಿಸ್ ಬ್ರಾಂಡೆಡ್, ನಕಲಿ ಔಷಧಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ನಮ್ಮೆಡನೆ ಸಹಕರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ರಾಷ್ಟ್ರೀಯ, ರಾಜ್ಯ ಹಾಗೂ ನಮ್ಮ ಜಿಲ್ಲಾ ಸಂಸ್ಥೆಗೆ ಬಂದ್‌ಗೆ ಸಮ್ಮತಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳಾದ ನರಸಿಂಹಮೂರ್ತಿ, ಸುದರ್ಶನ್ ರೆಡ್ಡಿ, ನರಸಿಂಮೂರ್ತಿ, ಪರಮೇಶ್ವರ, ಇಂದಿರಾ, ಚಂದ್ರ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


