ಕೊರಟಗೆರೆ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಗೈರಾಗಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್ ಮಂಜುನಾಥ್ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬರುವ ಮಕ್ಕಳಿಗಾಗಲಿ ಸಾರ್ವಜನಿಕರಿಗಾಗಿ ಯಾವುದೇ ತೊಂದರೆಗಳಾದಂತೆ ಸಿದ್ಧತೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಬ್ರಿಟಿಷರ ಜೊತೆ ಹೋರಾಡಿ ನಮಗಾಗಿ ನಮ್ಮ ನಾಡಿಗಾಗಿ ಪ್ರಾಣವನ್ನು ಅರ್ಪಿಸಿರುವ ಸ್ವತಂತ್ರ ಹೋರಾಟಗಾರರಿಗೆ ಪಿತಾಮಹರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.
ತಪ್ಪು ಯಾರು ಮಾಡುವುದಿಲ್ಲ ಪದೇ ಪದೇ ತಪ್ಪುಗಳನ್ನು ಮಾಡಬಾರದು ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಸರಿದಾರಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸ್ವತಂತ್ರ ದಿನಾಚರಣೆಯ ದಿನ ಸಿದ್ಧತೆಯ ವ್ಯವಸ್ಥೆ ವಹಿಸಿಕೊಂಡ ಇಲಾಖೆಗಳು ತಮ್ಮ ತಮ್ಮ ಕೆಲಸ ಜವಾಬ್ದಾರಿಯಿಂದ ಮಾಡಬೇಕು ಎಂದು ತಹಶೀಲ್ದಾರ್ ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296