ಪ್ರತಿದಿನ ಕುಡಿದು ಬಂದು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಮಗನನ್ನೇ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಪೊಲೀಸ್ ಠಾಣೆ ವ್ಯಾಪ್ತಿ ದೇವಾಲಪುರದಲ್ಲಿ ಮುನಿಸ್ವಾಮಿ ಎಂಬವರು ಕಿರುಕುಳ ನೀಡುತ್ತಿದ್ದ ಮಗ ತ್ಯಾಗರಾಜ ಎಂಬವನನ್ನು ಕೊಲೆ ಮಾಡಿದ್ದಾರೆ.
ತ್ಯಾಗರಾಜುಪ್ರತಿ ದಿನ ಕುಡಿದು ಬಂದು ತಂದೆ ಮುನಿಸ್ವಾಮಿ ಮತ್ತು ತಾಯಿ ಜತೆಗೆ ಜಗಳ ತೆಗೆಯುತ್ತಿದ್ದ. ಕುಡಿಯಲು ದುಡ್ಡು ಕೊಡದಿದ್ದರೆ ಹಲ್ಲೆ ಮಾಡುತ್ತಿದ್ದ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮುನಿಸ್ವಾಮಿ ದಂಪತಿ ಮಗನ ಕಿರುಕುಳದಿಂದ ಬೇಸತ್ತು, ಮಗಳ ಮನೆ ಸೇರಿಕೊಂಡಿದ್ದರು. ಅಲ್ಲಿಗೂ ಬಂದು ತಂದೆ ಮೇಲೆಯೇ ಹಣಕ್ಕಾಗಿ ಹಲ್ಲೆಗೆ ಮುಂದಾಗಿದ್ದ.
ಮಗನ ಕಿರುಕುಳದಿಂದ ಬೇಸರಗೊಂಡಿದ್ದ ತಂದೆ ಜಿಮ್ ನಲ್ಲಿ ಬಳಸುವ ಡಂಬಲ್ ನಿಂದ ತಲೆಗೆ ಚಚ್ಚಿ ಕೊಲೆ ಮಾಡಿದ್ದಾರೆ. ನಂತರ ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಅಡಿಶನಲ್ ಎಸ್ಪಿ ಪುರುಷೋತ್ತಮ ಪರೀಶೀಲನೆ ನಡೆಸಿದ್ದಾರೆ. ಅನುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy