ಪಾವಗಡ: ತಾಲೂಕಿನ ಶಾಸಕರು ಹಾಗೂ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನೂತನ ತುಮೂಲ್ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ವಿ.ವೆಂಕಟೇಶ್ ಅವರನ್ನು ಬುಧವಾರ ತುಮಕೂರು ನಗರದಲ್ಲಿ ಪಾವಗಡ ತಾಲೂಕಿನ ವಿವಿಧ ಲಂಬಾಣಿ ತಾಂಡಗಳ ಮುಖಂಡರು ಹಾಗೂ ಯುವಕರು ತೆರಳಿ ಅವರನ್ನು ಸನ್ಮಾನಿಸಿದರು.
ಪಾವಗಡ ತಾಲೂಕಿನ ತಾಂಡಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಇದೇ ವೇಳೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಎಚ್ ವಿ ವೆಂಕಟೇಶ್ ಮಾತನಾಡಿ, ಈಗಾಗಲೇ ಪಾವಗಡ ತಾಲೂಕಿನ ಎಲ್ಲಾ ತಾಂಡಗಳ ಸಮಗ್ರ ಅಭಿವೃದ್ಧಿಗೆ ಭದ್ಧನಾಗಿದ್ದೇನೆ. ಜೊತೆಗೆ ಮುಂದಿನ ತಿಂಗಳು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಜಯಂತಿ ದಿನ ಸೇವಾಲಾಲ್ ವೃತ್ತ ನಿರ್ಮಾಣ ಬಗ್ಗೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕು ಎಲ್ಲಾ ತಾಂಡಾದ ಯುವಕರು ಹಾಜರಿದ್ದರು.
ವರದಿ : ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4