nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು

    July 12, 2025

    ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು

    July 12, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ
    • ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು
    • ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು
    • ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು ಬೇಡ: ಎಸ್.ಎನ್.ನಾಗರಾಜು ಒತ್ತಾಯ
    • ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ.ಡಿ.ಪ್ರಭಾಕರ್ ಅವಿರೋಧ ಆಯ್ಕೆ
    • ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ
    • ಶಾಸಕರ ವಿರುದ್ಧ ಅಪಪ್ರಚಾರ: ದೂರು ನೀಡಲು ಮುಂದಾದ ಕಾಂಗ್ರೆಸ್ ಮುಖಂಡರು!
    • ಜನರಿಗೆ ತೊಂದರೆಯಾಗದಂತೆ ವಾಹನ ನಿಲ್ಲಿಸಿ: ವಾಹನ ಚಾಲಕರಿಗೆ ಇನ್ಸ್ಪೆಕ್ಟರ್ ಆರ್. ಕಿರಣ್ ಸಲಹೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೃಷಿಯ ಮೂಲ ಉದ್ದೇಶವನ್ನೇ ಉದಾರೀಕರಣ ನೀತಿ ಮರೆಮಾಚಿದೆ: ಬಸವರಾಜ ಪಾಟೀಲ್ ವೀರಾಪುರ
    ತುಮಕೂರು October 2, 2024

    ಕೃಷಿಯ ಮೂಲ ಉದ್ದೇಶವನ್ನೇ ಉದಾರೀಕರಣ ನೀತಿ ಮರೆಮಾಚಿದೆ: ಬಸವರಾಜ ಪಾಟೀಲ್ ವೀರಾಪುರ

    By adminOctober 2, 2024No Comments2 Mins Read
    dodda hosuru

    ತುಮಕೂರು: ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಒಳಗೊಂಡಿರುವ ನಮ್ಮ ಕೃಷಿಯ ಮೂಲ ಉದ್ದೇಶವನ್ನೇ ಉದಾರೀಕರಣ ನೀತಿ ಮರೆಮಾಚಿದೆ. ಕೈಗಾರಿಕಾ ಕ್ರಾಂತಿಯ ದುಷ್ಪರಿಣಾಮದಿಂದಾಗಿ ಕೃಷಿ ಹಣ ಮಾಡುವ ಕ್ಷೇತ್ರವಾಗಿ ಮಾರ್ಪಟ್ಟಿದೆ, ರೈತರೂ ಬಂಡವಾಳಿಗರಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಸಂಯೋಜಕರಾದ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.

    ಗಾಂಧೀ ಸಹಜಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವಕುಲಾಂತರಿ ಬೀಜರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದಹ್ಯಾಂಡ್ ಪೋಸ್ಟ್ ದೊಡ್ಡ ಹೊಸೂರಿನ 3ನೇ ದಿನದ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


    Provided by
    Provided by

    ರೈತರ ಮನೆಗಳಿಗೆ ಅಪರಿಚಿತರು ದಾರಿ ತಪ್ಪಿಬಂದರೂ ಊಟಕ್ಕೆ ಬಡಿಸಿಯೇ ಕಳುಹಿಸುತ್ತಿದ್ದರು. ಈ ನಮ್ಮ ಸಂಸ್ಕೃತಿಯು ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ವ್ಯಾಪಾರಕ್ಕಾಗಿ ಬಂದಿದ್ದಈಸ್ಟ್ಇಂಡಿಯಾ ಕಂಪನಿಗಳು ಜಾಗತೀಕರಣ ಹಾಗೂ ಉದಾರೀಕರಣದ ಹೆಸರಿನಲ್ಲಿ ಭಾರತವನ್ನು ಮತ್ತೆ ಪ್ರವೇಶಿಸುತ್ತಿವೆ. ನಾವು ದೇಶಿ ಅಸ್ಮಿತೆಯನ್ನು ಉಳಿಸಿಕೊಳ್ಳಲಾರದ ಸ್ಥಿತಿಗೆ ತಲುಪಿದ್ದೇವೆ. ರೈತರ ಮುಗ್ದತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಗಳು ಕೃಷಿಯಲ್ಲಿ ಜೀವ ವಿರೋಧಿ ತಂತ್ರಜ್ಞಾನವನ್ನು ಪ್ರಯೋಗ ಮಾಡಿದ್ರೋಹಎಸಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಧುನಿಕತೆಯು ಹಲವು ಸವಾಲುಗಳನ್ನು ಮುಂದಿಟ್ಟಿದೆ. ರೈತರ ಮುಂದೆ ಶ್ರೀಮಂತಿಕೆಯ ಆಶಾಗೋಪುರಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ 82 ರೀತಿಯ ಸಾಸಿವೆ ತಳಿಗಳಿವೆ. ಉತ್ತರ ಭಾರತದಲ್ಲಿ ಅಡುಗೆಗೆ ಪ್ರಧಾನವಾಗಿ ಸಾಸಿವೆ ಎಣ್ಣೆಯನ್ನು ಬಳಸಲಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಕಂಪನಿಗಳು ಸಾಸಿವೆ ಮಾರುಕಟ್ಟೆ ವ್ಯವಸ್ಥೆಯನ್ನುತಮ್ಮ ವಶ ಮಾಡಿಕೊಳ್ಳಲು ಹೊರಟಿವೆ. ಭಾರತೀಯಕೃಷಿಯ ಬೀಜಸ್ವಾಮ್ಯ ಸಾಧಿಸಲು ಹಾತೊರೆಯುತ್ತಿರುವ ಕಂಪನಿಗಳು ಈಗ ಕುಲಾಂತರಿ ಸಾಸಿವೆ ಪರಿಚಯಿಸಲು ತುದಿಗಾಲಿನಲ್ಲಿ ನಿಂತಿವೆ ಎಂದರು.
    ಮಾನ್ಸೆಂಟೋ ಮತ್ತು ಸಿಂಜೆಂಟಾ ಕಂಪನಿಗಳ ಮುಂದೆ ಕೃಷಿಯ ಮೂಲ ಉದ್ದೇಶವೇಗೌಣವಾಗಿದೆ. ಸಣ್ಣ ಸಣ್ಣ ಚಳವಳಿಗಳನ್ನು ರೂಪಿಸುವ ಮೂಲಕ ಇದನ್ನು ತಡೆಯಲು ಸಾಧ್ಯವಿದೆ. ಜನರೂ ಆಹಾರ ಗುಣಮಟ್ಟದ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದು, ಗಾಣದ ಎಣ್ಣೆಯನ್ನು ಬಳಸಲು ಶುರು ಮಾಡಿದ್ದಾರೆ. ಹೀಗಾಗಿ ಜನರ ಮುಂದೆ ಹೋಗಲು ನಮಗೆ ಇನ್ನೂಅವಕಾಶವಿದೆ ಎಂದು ಅವರು ತಿಳಿಸಿದರು.

    ತಂತ್ರಜ್ಞಾನದ ಒಳಿತು, ಕೆಡುಕು ಮನುಷ್ಯನ ಬಳಕೆಯ ಮೇಲೆ ನಿಂತಿದೆ. ಇಂದಿನ ಸರ್ಕಾರಗಳು ಸಂವೇದನಾ ಶೀಲತೆಯನ್ನು ಕಳೆದುಕೊಂಡಿವೆ. ಜನರಿಂದಜನರಿಗಾಗಿ ಪ್ರಜಾಪ್ರಭುತ್ವ ಎನ್ನುವ ಬದಲಾಗಿ ಕಾರ್ಪೋರೇಟ್ ಗಳಿಂದ, ಕಾರ್ಪೋರೇಟ್ ಗಳಿಗಾಗಿ ಆಗಿದೆ. ವಿದೇಶಿ ಕಂಪನಿಗಳ ಒತ್ತಡಕ್ಕೆ ಸರ್ಕಾರಗಳು ಮಣಿಯುತ್ತಿದ್ದು, ರಾಷ್ಟ್ರೀಯವಾದ ಅನುಸರಿಸುತ್ತಿರುವ ನಾಯಕರೂ ಕಂಪನಿಗಳ ಪರವಾಗಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.

    ಕರ್ನಾಟಕಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಉಡೆ ಪಿ. ಕೃಷ್ಣ ಅವರು ಮಾತನಾಡಿ, ಸರ್ಕಾರಗಳು ಕೃಷಿ ನೀತಿಗಳನ್ನು ಜಾರಿ ಮಾಡುವ ಮುನ್ನ ರೈತರು ಮತ್ತು ವಿಜ್ಞಾನಿಗಳನ್ನು ಮುಖಾಮುಖಿ ಮಾಡಿ ಸಾಧಕ ಬಾಧಕಗಳ ಕುರಿತುಚರ್ಚಿಸಬೇಕು ಎಂದರಲ್ಲದೆ, ತಲತಲಾಂತರಗಳಿಂದ ಬಂದಿರುವ ಕೃಷಿ ಹಾಗೂ ಅದರ ಪ್ರಾಮುಖ್ಯತೆಯನ್ನು ನಾಶಮಾಡಲಾಗುತ್ತಿದೆ. ಇದರ ವಿರುದ್ಧಕರ್ನಾಟಕ ಮೊದಲು ಜಾಗೃತವಾದರೆ ಇತರೆ ರಾಜ್ಯಗಳಿಗೂ ವ್ಯಾಪಿಸಲು ಅನುಕೂಲವಾಗಲಿದೆ. ನಾವು ಗಾಂಧಿ ಮಾರ್ಗದಲ್ಲಿ ಸಾಗಿದರೆ ಯಶಸ್ಸು ನಮ್ಮದಾಗಲಿದೆ ಎಂದು ಅವರು ಸಲಹೆ ನೀಡಿದರು.

    ಕುಲಾಂತರಿ ಮುಕ್ತ ಭಾರತ ಸತ್ಯಾಗ್ರಹಕ್ಕೆ ಮಠಮಾನ್ಯಗಳು, ಕನ್ನಡಪರ ಸಂಘಟನೆಗಳು, ಕೃಷಿ ಉತ್ಪನ್ನ ಬಳಕೆದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿಪಶ್ಚಿಮಘಟ್ಟ ಉಳಿಸಿ ಆಂದೋಲದ ಸಿ.ಪಿ.ಮಾಧವನ್, ಪರಿಸರ ಹೋರಾಟಗಾರ ಬಾಲಕೃಷ್ಣ, ಗಾಂಧಿವಾದಿ ದೊರೆಸ್ವಾಮಿ ಹಾಗೂ ಪರಿಸರವಾದಿ ಸಿ. ಯತಿರಾಜು, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಹೋರಾಟಗಾರ್ತಿ ಶಂಕರಕೃಷ್ಣ ಮತ್ತಿತರರು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ

    July 11, 2025

    ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ: ಮಾಜಿ ಸಚಿವ ಹೇಳಿಕೆ

    July 9, 2025
    Our Picks

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ತುಮಕೂರು: ತುಮಕೂರಿನ ಗೊಲನ ಎಂಟರ್ ಪ್ರೈಸಸ್ ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದು,  ಕೇಂದ್ರ ಸರ್ಕಾರದ ಮಾನ್ಯತೆಯನ್ನು ಪಡೆಯುವ ಮೂಲಕ…

    ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು

    July 12, 2025

    ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು

    July 12, 2025

    ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು ಬೇಡ: ಎಸ್.ಎನ್.ನಾಗರಾಜು ಒತ್ತಾಯ

    July 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.