ದಾವಣಗೆರೆ: ಟ್ರಾನ್ಸ್’ಫರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಳಲಕೆರೆ ಗ್ರಾಮದಲ್ಲಿ ನಡೆದಿದೆ.
ಮುತ್ತು(32) ಮೃತಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಸಮಸ್ಯೆ ಎದುರಾಗಿತ್ತು ಹಾಗಾಗಿ ಗ್ರಾಮಸ್ಥರು ಕೆಇಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ಲೈನ್ ಮ್ಯಾನ್ ದುರಸ್ಥಿಗೆ ಎಂದು ಆಗಮಿಸಿದ್ದ. ಈ ವೇಳೆ ಹೈ ವೋಲ್ಟೇಜ್ ವಿದ್ಯುತ್ ನಿಂದಾಗಿ ಲೈನ್ ಮ್ಯಾನ್ ಸಾವನ್ನಪ್ಪಿದ್ದಾರೆ.
ಜೀವರಕ್ಷಕ ಸಾಧನಗಳಾದ ಕೈಗವಸು, ಶೂ, ಇತರೆ ಜೀವ ರಕ್ಷಕ ಅಗತ್ಯ ಸಲಕರಣೆಗಳು ಇಲ್ಲದ ಕಾರಣ ಈ ಘಟನೆ ನಡೆದಿದೆ. ಲೈನ್ ಮ್ಯಾನ್ ಸಾವಿಗೆ ಕೆಇಬಿ ನಿರ್ಲಕ್ಷ್ಯ ಕಾರಣ ಅಂತ ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296