ಕೇರಳ: ಲಾರಿಯೊಂದು ಹರಿದ ಪರಿಣಾಮ ರಸ್ತೆ ಬದಿಯಲ್ಲಿ ಮಲಗಿದ್ದ ಅಲೆಮಾರಿ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ತ್ರಿಶೂರ್ ಜಿಲ್ಲೆಯ ನಾಟಿಕ ಎಂಬಲ್ಲಿ ನಡೆದಿದೆ.
ಕಾಳಿಯಪ್ಪನ್(50), ನಾಗಮ್ಮ(39), ಬಂಗಾಜಿ(20), ಜೀವನ್(4) ಮತ್ತು ವಿಶ್ವ(1) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಕಣ್ಣೂರು ಮೂಲದ ಲಾರಿ ಚಾಲಕ ಅಲೆಕ್ಸ್ (35) ಎಂಬಾತನನ್ನು ಘಟನೆಯ ಬೆನ್ನಲ್ಲೇ ಬಂಧಿಸಲಾಗಿದೆ.
ಕಣ್ಣೂರಿನಿಂದ ಕೊಚ್ಚಿಗೆ ಲಾರಿ ತೆರಳುತ್ತಿದ್ದು, ಲಾರಿಯಲ್ಲಿ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಕಂಡೆಕ್ಟರ್ ಹಾಗೂ ಲಾರಿ ಚಾಲಕ ಇಬ್ಬರೂ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಲೆಮಾರಿ ಕುಟುಂಬವು ರಸ್ತೆಯ ಬ್ಯಾರಿಕೇಡ್ ನಿಂದ ಸುರಕ್ಷಿತ ಸ್ಥಳದಲ್ಲಿ ಮಲಗಿದ್ದರು. ಆದರೆ ಲಾರಿಯು ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಅಲೆಮಾರಿಗಳ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296