ಮಧುಗಿರಿ: ಆರು ಜನರ ಗುಂಪೊಂದು ತೋಟದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಕೇಬಲ್ ಹಾಗೂ ಮೋಟಾರು ಪೈಪುಗಳನ್ನು ಕಳವು ಮಾಡಿರುವ ಶನಿವಾರ ಮಧ್ಯರಾತ್ರಿ ನಡೆದಿದೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಹಾಗೂ ನೆರೆಯ ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ರತ್ನಗಿರಿ ರಸ್ತೆಯಲ್ಲಿ ಜಮೀನು ಮಾಲೀಕ ಸಚೀಂದ್ರ ರವರಿಗೆ ಸೇರಿದ ಜಮೀನಿನ ತೋಟದ ಮನೆಯ ಸಮೀಪ ಇಡಲಾಗಿದ್ದ ಸುಮಾರು 300 ಮೀಟರ್ ಮೋಟಾರು ಕೇಬಲ್ ಹಾಗೂ 35 ಲೆಂತ್ ಪೈಪುಗಳನ್ನು ಶನಿವಾರ ಸುಮಾರು ತಡ ರಾತ್ರಿ 1 ಗಂಟೆ ಸಮಯದಲ್ಲಿ 6 ಜನರಿದ್ದ ಕಳ್ಳರ ಗುಂಪು ಕಳ್ಳತನ ಮಾಡಿದೆ.
ತೋಟದ ಮನೆಯಲ್ಲಿ ಮಲಗಿದ್ದ ನರಸಪ್ಪ ಎನ್ನುವವರಿಗೆ ಆರು ಜನರ ಕಳ್ಳರಲ್ಲಿ ಮುಸುಕುದಾರಿಗಳಲ್ಲೊಬ್ಬ ಚಾಕು ತೋರಿಸಿ ಬೆದರಿಸಿ ಮನೆಯ ಮುಂದೆ ಹಾಕಿದ್ದ ಕೇಬಲ್ ಹಾಗೂ ಪೈಪುಗಳನ್ನು ಅವರು ತಂದಿದ್ದ ವಾಹನಕ್ಕೆ ತುಂಬಿಕೊಂಡು ರತ್ನಗಿರಿ ಕಡೆ ಪರಾರಿಯಾಗಿದ್ದಾರೆ ನಂತರ ಬೆಳಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


