ಮಧುಗಿರಿ : ಮಧುಗಿರಿ ತಾಲೂಕಿನ ಎಲ್ಲ ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳಿಂದ ಶಾಂತಿ ಸಹನೆಯಿಂದ ಮುಷ್ಕರ ನಡೆಯಿತು.
ಗ್ರಾಮ ಆಡಳಿತ ತಾಲೂಕು ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾತನಾಡಿ, ಮೂಲಭೂತ ಸೌಲಭ್ಯಗಳು ನೀಡಬೇಕು, ತಾಂತ್ರಿಕ ವೇತನ ನೀಡಬೇಕು ಎಂದು ಮುಷ್ಕರ ಮಾಡುತ್ತಿದ್ದೇವೆ. ಐದು ನೂರು ಪ್ರಯಾಣ ಭತ್ಯೆ ನೀಡಿರುತ್ತಾರೆ, ಇದನ್ನು ಐದು ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆ ರೂಲ್ಸ್ ತೆಗೆದಿರುತ್ತಾರೆ, ಇದನ್ನು ಸರಿಪಡಿಸಬೇಕು. 22, 23 ವರ್ಷ ಆದರೂ ಪದನ್ನೊತಿ ನೀಡುತ್ತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮದುಗಿರಿ ಶೈಕ್ಷಣಿಕ ಜಿಲ್ಲಾ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರವರು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ರವಿಕುಮಾರ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ನಿಂಗಪ್ಪ ರಾಮಗಿರಿ ಇನ್ನು ಮುಂತಾದ ಗ್ರಾಮದ ಆಡಳಿತ ಅಧಿಕಾರಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4