ಮಾಗಡಿ ತಾಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸರಕು ಸಾಗಣೆ ಆಟೊ ಉರುಳಿ ಮೂವರು ಮೃತಪಟ್ಟಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದವರಾದ ರತ್ನಮ್ಮ (53), ಲಕ್ಕಮ್ಮ (40) ಹಾಗೂ ಮಂಜುನಾಥ (32) ಮೃತಪಟ್ಟವರು. ನೆಲಮಂಗಲದಲ್ಲಿ ತರಕಾರಿ ತೆಗೆದುಕೊಂಡು ಬೆಳ್ಳೂರಿಗೆ ವಾಪಸ್ ಹೋಗುವಾಗ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy