- ಚಂದ್ರಹಾದನೂರು
ಸರಗೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಕ್ಷೇತ್ರದ ಜನಸಾಮಾನ್ಯರ ಹಿತಕ್ಕಾಗಿ ಎಂತಹ ಹೋರಾಟ ಬೇಕಾದರೂ ಕೂಡ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹೇಳಿದರು.
ತಾಲ್ಲೂಕಿನ ಕಬಿನಿ ಜಲಾಶಯದ ಬೀಚನಹಳ್ಳಿ ಮುಖ್ಯ ರಸ್ತೆಯ 25 ಕೋಟಿ ರೂ. ವೆಚ್ಚ ದ ಕಾಮಗಾರಿಯ ಅವ್ಯವಸ್ಥೆ ಖಂಡಿಸಿ ಕಬಿನಿ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಮಗಾರಿ ಆರಂಭಗೊಂಡು 4-5 ತಿಂಗಳಾದರೂ ಸಮರ್ಪಕವಾಗಿ ಗುತ್ತಿಗೆದಾರದಿಂದ ಕಾಮಗಾರಿ ನಡೆಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಈ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿರುವ ಗ್ರಾಮಗಳ ನಿವಾಸಿಗಳು ಪ್ರತಿ ನಿತ್ಯವೂ ಧೂಳನ್ನು ಉಸಿರಾಡುವಂತಾಗಿದೆ. ಇದ್ದರಿಂದ ಆರೋಗ್ಯದ ಮೇಲೆ ಬಹಳಷ್ಟು ದುಷ್ಟರಿಣಾಮ ಬೀರುತ್ತದೆ. ಸಮರ್ಪಕವಾಗಿ ಹಂತ ಹಂತವಾಗಿ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸದೇ, 10 ಕಿ.ಮೀ.ವರೆಗೂ ಅವ್ಯವಸ್ಥೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಇಲಾಖೆಯ ಅಧಿಕಾರಿ ಶಿವಮಾದಯ್ಯ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಅವರು, ಈ ಕಾಮಗಾರಿ ಮುಗಿಸಲು 24 ತಿಂಗಳು ಅವಕಾಶವಿದೆ. ತೀವ್ರವಾಗಿ ಮಳೆಯಿಂದ ಕಾರಣ ಕಾಮಗಾರಿ ಮಾಡಲು ತಡವಾಗಿದೆ. ಗುತ್ತಿಗೆದಾರ ನಾಗಮಂಗಲದ ಚಂದ್ರಶೇಖರ್ ಮತ್ತು ವೆಂಕಟರಾಮೇಗೌಡ ರವರಿಂದ ಕಾಮಗಾರಿಗಳಲ್ಲಿ ಯಾವುದೇ ಲೋಪಗಳಿಲ್ಲದ ಇಲ್ಲದ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುವುದು. ಕಾಮಗಾರಿಯನ್ನು ಅಧಿಕಾರಿಗಳು ನೀತ್ಯವೂ ಪರಿಶೀಲಿಸುತ್ತಾರೆ. ಧೂಳುಮಯಾಗಿರುವ ರಸ್ತಗೆ ನಿತ್ಯವೂ ನೀರನ್ನು ಹಾಕಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ನೇರಳೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ವೆಂಕಟೇಶ್, ಮುಖಂಡರಾದ ಪಟೇಲ್, ರಾಜೇಗೌಡ, ನಾಗನಾಯಕ, ನಾಗಶೆಟ್ಟಿ, ವಿಜೂ ಅಂಚಿಪುರ, ರಾಜಪ್ಪ, ನಿಂಗರಾಜು, ಕಬಿನಿ ರಮೇಶ್, ಬಡಗಲಪುರ ವೆಂಕಟೇಶ್, ಕರಿಯಪ್ಪ, ಶಿವು, ಅಶೋಕ್, ಬಸವ, ನಾಗರಾಜು, ಆಟೋ ರಮೇಶ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
“ಅಧಿಕಾರಿಗಳು ಮತ್ತು ಗುತ್ತಿಗೆದಾರ ಬೇಜವಾಬ್ದಾರಿತನವನ್ನು ಯಾರು ಕೇಳುತ್ತಿಲ್ಲ ಎಂದು ಸಾಮಾನ್ಯ ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ. ಇನ್ನು ಮುಂದೆ ಇಂಥದ್ದಕ್ಕೆ ಅವಕಾಶ ಕೊಡುವುದಿಲ್ಲ.ಜನಸಾಮಾನ್ಯರ ಹಿತಕ್ಕಾಗಿ ಎಂತಹ ಹೋರಾಟವನ್ನು ಮಾಡಲು ಸಿದ್ದನಾಗಿದ್ದೇನೆ. ಮೇಲಾಧಿಕಾರಿಗಳ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ”.
– ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ