ಪ್ರಧಾನಿ ನರೇಂದ್ರಮೋದಿ ಅವರು ಭಾರತವನ್ನು ವಿಶ್ವ ಮುಂಚೂಣಿಯಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ಯಬೇಕು, ಅದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭಿನಂದಿಸುವುದನ್ನು ನಾವು ನೋಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ನೂರ್ಕಾಲ ಬಾಳಬೇಕು, ಸುದೀರ್ಘ ರಾಜಕೀಯ ಜೀವನ ಸಾಗಿಸಬೇಕು ಎನ್ನುವುದು ನಮ ಪ್ರಾಮಾಣಿಕ ಅಪೇಕ್ಷೆ. ಖರ್ಗೆ ಅವರ ಕಣ್ಣ ಮುಂದೆಯೇ ಹೆಮ್ಮೆಯ ಪ್ರಧಾನಿ ನರೇಂದ್ರ ಜೀ ಅವರು ಭಾರತವನ್ನು ವಿಶ್ವ ಮುಂಚೂಣಿಯಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ಯಬೇಕು, ಅದನ್ನು ಖರ್ಗೆ ಅವರು ಅಭಿನಂದಿಸುವುದನ್ನು ನೋಡಬೇಕೆಂಬುದು ನಮ ಹೆಬ್ಬಯಕೆ ಎಂದು ಅವರು ಖರ್ಗೆ ಟಾಂಗ್ ನೀಡಿದ್ದಾರೆ.
ಕೆಳಗಿಳಿಸುವವರ ವ್ಯೂಹ ಬೇಧಿಸಿ ಮೂರನೆ ಬಾರಿಯೂ ಮೇಲೆದ್ದು ನಿಂತ ಪ್ರಧಾನಿ ಮೋದಿಯವರ ಈವರೆಗಿನ ನಡೆ, ಸಾಧಿಸಿರುವ ಸಾಧನೆಗಳು ಶತಕೋಟಿ ಭಾರತೀಯರ ಕನಸನ್ನು ನನಸಾಗಿಸುತ್ತಿದೆ ಈ ನಿಟ್ಟಿನಲ್ಲಿ ಭಾರತ ಜಗತ್ತಿನ ಮುಂದೆ ನಂ.1 ಸ್ಥಾನದಲ್ಲಿ ತಲೆ ಎತ್ತಿ ನಿಲ್ಲವುದರಲ್ಲೂ ನಮಗೆ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು.
ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿಜಯೇಂದ್ರ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296