ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜಲಾಶಯವು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಶಿಂಷಾ ನದಿಗೆ ನೀರನ್ನು ಬಿಡುವ ಸಾಧ್ಯತೆ ಇದೆ.
ಯಾವುದೇ ಸಮಯದಲ್ಲಿ ಒಳ ಹರಿವಿಗೆ ತಕ್ಕಂತೆ ಜಲಾಶಯದಿಂದ ಶಿಂಷಾ ನದಿಗೆ ನೀರನ್ನು ಹರಿಸಲಾಗುವುದು. ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುವ ಸಂಭವವಿದ್ದು ಮಾರ್ಕೋನಹಳ್ಳಿ ಜಲಾಶಯದ ಕೆಳಭಾಗದ ಹಾಗೂ ನದಿ ಪಾತ್ರದ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ, ಕಾಡಶೆಟ್ಟಿಹಳ್ಳಿ, ಬಿಸಿನೆಲೆ, ತೊರೆಹಳ್ಳಿ, ಶಾನುಭಾಗೋನಹಳ್ಳಿ, ಕಿರಂಗೂರು, ಪಡುವಗೆರೆ, ಬೆಟ್ಟೆಹಳ್ಳಿ, ದೊಡ್ಡಕಲ್ಲಹಳ್ಳಿ, ವಳಗೆರಪುರ, 14ನೇ ಮೈಲಿ ಬಂಗಲಿ, ಚಂದನಹಳ್ಳಿ, ಅಂಚಿಪುರ, ಕೀಲಾರ, ಉಂಗ್ರ, ತೊರೆಬೊಮ್ಮನಹಳ್ಳಿ, ಕೊಡವತ್ತಿ, ಹನುಮಂತನಗರ ಹಾಗೂ ನಾಗಮಂಗಲ ತಾಲ್ಲೂಕಿನ ಮಲ್ಲನಕೊಪ್ಪಲು, ದೊಡ್ಡ ಉಪ್ಪಳ, ತಿಗಳರಕೊಪ್ಪಲು, ಬಳ್ಳೆಕೆರೆ, ಹದಮಗೆರೆ, ಅರಕೆರೆ, ಚೊಟ್ಟನಹಳ್ಳಿ, ಕೂಡಗಬಾಳು, ಕೌಡ್ಲೆ, ಯಡವನಹಳ್ಳಿ, ಬೆಕ್ಕಳಲೆ, ಪಟೇಲನಕೊಪ್ಪಲು, ಕಿರಂಗೂರು ಹಾಗೂ ಇನ್ನಿತರೆ ಶಿಂಷಾ ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತ ಹೇಮಾವತಿ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296