nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    May 28, 2026

    ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

    May 28, 2026

    ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

    May 28, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ
    • ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ
    • ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ
    • ಪಲ್ಸ್ ಪೋಲಿಯೋ ಲಸಿಕೆ: ತುಮಕೂರಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ, ಅಲೆಮಾರಿ ಸಮುದಾಯ ಕೇಂದ್ರೀಕರಿಸಿ: ಜಿಲ್ಲಾಧಿಕಾರಿ ಸೂಚನೆ
    • ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 
    • ವಿಶ್ವ ಪರಿಸರ ದಿನಾಚರಣೆ ಬಗ್ಗೆ ರೀಲ್ಸ್ ಸ್ಪರ್ಧೆ: ನೀವೂ ಭಾಗವಹಿಸಬಹುದು
    • ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ತುಮಕೂರು: ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್‌ ಸೆಟ್‌ ನಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ; ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ
    ರಾಜ್ಯ ಸುದ್ದಿ December 17, 2025

    ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ

    By adminDecember 17, 2025No Comments2 Mins Read
    jail inmate surveillance

    ಬೆಂಗಳೂರು: ಕರ್ನಾಟಕದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ರಾಜ್ಯದ ಪ್ರಮುಖ ಜೈಲುಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಲಾಗಿದೆ. ಕಳೆದ 36 ಗಂಟೆಗಳಿಂದ ನಡೆದ ಈ ವಿಶೇಷ ತಪಾಸಣೆಯಲ್ಲಿ ಕೈದಿಗಳ ಬಳಿ ಇದ್ದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಮಾದಕ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

    ವಿವಿಧ ಜೈಲುಗಳಲ್ಲಿ ನಡೆದ ಕಾರ್ಯಾಚರಣೆ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ ಮತ್ತು ವಿಜಯಪುರ ಜೈಲುಗಳಲ್ಲಿ ಈ ಮಿಂಚಿನ ದಾಳಿ ನಡೆಸಲಾಗಿದೆ.


    Provided by
    Provided by
    • ಪರಪ್ಪನ ಅಗ್ರಹಾರ (ಬೆಂಗಳೂರು): ಇಲ್ಲಿ ನಡೆಸಿದ ತಪಾಸಣೆಯಲ್ಲಿ 14 ಮೊಬೈಲ್ ಫೋನ್‌ಗಳು, 9 ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು ಮತ್ತು 10 ವಿವಿಧ ಬಗೆಯ ಚಾಕುಗಳು ಪತ್ತೆಯಾಗಿವೆ.

    • ಮೈಸೂರು ಜೈಲು: ಇಲ್ಲಿ ಅತಿ ಹೆಚ್ಚು ಎಂದರೆ 9 ಮೊಬೈಲ್ ಫೋನ್‌ಗಳು ಹಾಗೂ 11 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    • ಬೆಳಗಾವಿ ಜೈಲು: ಇಲ್ಲಿ 4 ಮೊಬೈಲ್ ಫೋನ್‌ಗಳು ಹಾಗೂ ಜೈಲಿನ ಹೊರಗಿನಿಂದ ಎಸೆಯಲ್ಪಟ್ಟಿದ್ದ ಸುಮಾರು 366 ಗ್ರಾಂ ಗಾಂಜಾವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

    • ಮಂಗಳೂರು ಮತ್ತು ವಿಜಯಪುರ: ಮಂಗಳೂರಿನಲ್ಲಿ 4 ಹಾಗೂ ವಿಜಯಪುರದಲ್ಲಿ 1 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

    ಅಧಿಕಾರಿಗಳ ಎಚ್ಚರಿಕೆ: ಒಟ್ಟಾರೆಯಾಗಿ ಈ ಕಾರ್ಯಾಚರಣೆಯಲ್ಲಿ ಇದುವರೆಗೆ 67 ಮೊಬೈಲ್‌ ಫೋನ್‌ಗಳು, 48 ಸಿಮ್ ಕಾರ್ಡ್‌ಗಳು, 10 ಹರಿತವಾದ ಆಯುಧಗಳು ಹಾಗೂ 60,880 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 6 ಪ್ರಕರಣಗಳನ್ನು ದಾಖಲಿಸಲಾಗಿದೆ.

      “ಕಾರಾಗೃಹಗಳಲ್ಲಿ ಅಕ್ರಮಗಳನ್ನು ತಡೆಯುವುದು ನಮ್ಮ ಮೊದಲ ಆದ್ಯತೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಪೂರ್ಣ ಬೆಂಬಲ ನೀಡಲಾಗುವುದು. ಆದರೆ, ಉದ್ದೇಶಪೂರ್ವಕವಾಗಿ ಅಕ್ರಮಗಳಲ್ಲಿ ಭಾಗಿಯಾಗುವ ಅಥವಾ ಕೈದಿಗಳಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು”

    — ಡಿಜಿಪಿ ಅಲೋಕ್ ಕುಮಾರ್

    ಜೈಲುಗಳು ಕೈದಿಗಳಿಗೆ ಐಷಾರಾಮಿ ಅಡ್ಡೆಗಳಾಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಅಲೋಕ್ ಕುಮಾರ್ ಅವರನ್ನು ಈ ಹುದ್ದೆಗೆ ನೇಮಿಸಿತ್ತು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ಈ ಶಿಸ್ತುಕ್ರಮ ಜರುಗಿಸುವ ಮೂಲಕ ಅಕ್ರಮ ಎಸಗುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲೂ ಇಂತಹ ಕಟ್ಟುನಿಟ್ಟಿನ ತಪಾಸಣೆಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 

    May 28, 2026

    ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ಆರ್.ವಿ.ದೇಶಪಾಂಡೆ

    May 26, 2026

    ಇಂಧನ ದರ ಏರಿಕೆ: ರಾಜಕೀಯ ಮಾಡದೆ ವ್ಯಾಟ್ ಕಡಿಮೆ ಮಾಡಿ; ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಒತ್ತಾಯ

    May 26, 2026

    Leave A Reply Cancel Reply

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    May 28, 2026

    ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ (Pre-Metric) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ…

    ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

    May 28, 2026

    ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

    May 28, 2026

    ಪಲ್ಸ್ ಪೋಲಿಯೋ ಲಸಿಕೆ: ತುಮಕೂರಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ, ಅಲೆಮಾರಿ ಸಮುದಾಯ ಕೇಂದ್ರೀಕರಿಸಿ: ಜಿಲ್ಲಾಧಿಕಾರಿ ಸೂಚನೆ

    May 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.